ಎಚ್‍ಡಿಕೆ ಪ್ರಮಾಣವಚನಕ್ಕೆ ದುಬಾರಿ ವೆಚ್ಚ – ರಾಜ್ಯ ಸರ್ಕಾರಕ್ಕೆ ಲೆಕ್ಕ ಕೇಳಿದ್ರು ಆಂಧ್ರ ಸಿಎಂ

Public TV
1 Min Read
ANDHRA CM

ಬೆಂಗಳೂರು: ಎಚ್‍ಡಿ ಕುಮಾರಸ್ವಾಮಿ ಅವರ ಪ್ರಮಾಣವಚನ ಸಮಾರಂಭದ ದುಬಾರಿ ವೆಚ್ಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಲೆಕ್ಕ ಕೇಳಿದ್ದಾರೆ.

ದುಬಾರಿ ವೆಚ್ಚದ ಬಿಲ್ ನೋಡಿ ನೆರೆಯ ಆಂಧ್ರ ಸಿಎಂ ಕಕ್ಕಾಬಿಕ್ಕಿಯಾಗಿದ್ದಾರೆ. ನಾನು ಉಳಿದುಕೊಂಡಿದ್ದು ಕೇವಲ 4-5 ಗಂಟೆ ಮಾತ್ರವಾಗಿದ್ದು, ಉಳಿದುಕೊಳ್ಳಲು ಪ್ರೆಸಿಡೆನ್ಶಿಯಲ್ ಸೂಟ್‍ಕೊಟ್ಟಿದ್ದರು. ಹೀಗಾಗಿ ಇದ್ದ ಕೆಲವೇ ಗಂಟೆಗೆ 9 ಲಕ್ಷ ಬಿಲ್ ಹೇಗೆ ಮಾಡಿದ್ರು. ಈ ಕುರಿತು ತನಿಖೆ ಆಗಬೇಕು. ನಮ್ಮ ಹೆಸರಲ್ಲಿ ಸುಳ್ಳು ಲೆಕ್ಕ ಕೊಡಲು ಸಾಧ್ಯವಿಲ್ಲ. ನಾಲ್ಕೈದು ಗಂಟೆ ವಾಸ್ತವ್ಯಕ್ಕೆ ಇಷ್ಟೊಂದು ಖರ್ಚಾಗಿದ್ಯಾ ಅಂತ ಅವರು ಪ್ರಶ್ನಿಸಿದ ಅವರು ಲೆಕ್ಕ ಕೊಡುವಂತೆ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ.

OATH

ಚಂದ್ರಬಾಬು ನಾಯ್ಡು ತಾಜ್ ವೆಸ್ಟೆಂಡ್‍ನಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು 2 ಲಕ್ಷ ಬಿಲ್ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೇ ಚಂದ್ರಬಾಬು ಹೆಸರಲ್ಲಿ ಮತ್ತೆ ಮೂರು ಇನ್‍ವಾಯ್ಸ್‍ಗಳು ರೆಡಿ ಮಾಡಿರುವುದು ಪತ್ತೆಯಾಗಿದೆ. ಪ್ರತಿಯೊಂದು ಇನ್‍ವಾಯ್ಸ್‍ಗೆ 15 ಸಾವಿರ ರೂ. ಬಿಲ್ ಮಾಡಲಾಗಿದೆ. ಎಲ್ಲಾ ಸೇರಿಸಿದ್ರೂ ಆಗೋದು ಎರಡೂವರೆ ಲಕ್ಷ. ಆದ್ರೆ ಅದು ಹೇಗೆ 9 ಲಕ್ಷ ಬಿಲ್ ಮಾಡಿದ್ರು ಎಂಬ ಪ್ರಶ್ನೆಯೊಂದು ಉದ್ಭವವಾಗಿದೆ. ಇದನ್ನೂ ಓದಿ: 7 ನಿಮಿಷದ ಪ್ರಮಾಣವಚನ ಸಮಾರಂಭಕ್ಕೆ 42 ಲಕ್ಷ ರೂ. ಖರ್ಚು: ಯಾರಿಗೆ ಎಷ್ಟು ಖರ್ಚು? ಇಲ್ಲಿದೆ ಮಾಹಿತಿ

685783 kumaraswamy oath reuters

ಒಟ್ಟಿನಲ್ಲಿ ಪ್ರಮಾಣವಚನ ನೆಪದಲ್ಲಿ ಅಧಿಕಾರಿಗಳು ಫೇಕ್ ಬಿಲ್ ಸೃಷ್ಟಿಸಿ ದುಡ್ಡು ಹೊಡೆಯೋಕೆ ಹೊರಟಿದ್ದಾರಾ ಎಂಬ ಪ್ರಶ್ನೆಯೊಂದು ಎದುರಾಗಿದ್ದು, ಈ ಕುರಿತು ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು. ಇದನ್ನೂ ಓದಿ: ದುಂದುವೆಚ್ಚಕ್ಕೆ ಕಡಿವಾಣ ಹಾಕ್ತೀನಿ ಅಂದಿದ್ದ ಸಿಎಂ ಪ್ರಮಾಣವಚನಕ್ಕೆ ಖರ್ಚಾಗಿರೋದು ಬರೋಬ್ಬರಿ 42ಲಕ್ಷ ರೂ.!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *