ಚಿಕ್ಕಬಳ್ಳಾಪುರ: ಕಳುವಾಗಿದ್ದ ಯಮಹಾ ಬೈಕ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಶುಕ್ರವಾರ ಮುಂಜಾನೆ ಮಂಜುನಾಥ್ ಅವರಿಗೆ ಸೇರಿದ್ದ ಯಮಹಾ ಬೈಕ್ ಕಳುವಾಗಿತ್ತು. ಮನೆ ಮುಂದೆ ನಿಲ್ಲಿಸಿದ್ದ ಯಮಹಾ ಬೈಕನ್ನ ಮುಂಜಾನೆ 4 ಗಂಟೆ ಸಮಯದಲ್ಲಿ ಕಳ್ಳರು ಕಳವು ಮಾಡಿದ್ದರು.
ಈ ಬಗ್ಗೆ ಬೆಳಗ್ಗೆ ಬೈಕ್ ಮಾಲೀಕ ಮಂಜುನಾಥ್ ತನ್ನ ಸಹೋದರ ಸುನಿಲ್ ಫೇಸ್ ಬುಕ್ ಅಕೌಂಟ್ ನಲ್ಲಿ ಬೈಕ್ ಫೋಟೋ ಹಾಕಿ, ಈ ಬೈಕ್ ಕಳುವಾಗಿದೆ ಎಲ್ಲಿಯಾದರೂ ಕಂಡರೆ ಈ ನಂಬರಿಗೆ ಮಾಹಿತಿ ನೀಡಿ ಅಂತ ಪೋಸ್ಟ್ ಮಾಡಿದ್ದರು. ಅದೃಷ್ಟವಶಾತ್ ಕಳ್ಳರು ಕದ್ದೊಯ್ದಿದ್ದ ಬೈಕ್ ಪೆಟ್ರೋಲ್ ಆರಿ ಹೋಗಿದ್ದು, ದೊಡ್ಡಬಳ್ಳಾಪುರ ನಗರದಲ್ಲಿ ತಳ್ಳಿಕೊಂಡು ಹೋಗುತ್ತಿದ್ದರು.
ಈ ವೇಳೆ ಸಂತೋಷ್ ಬೈಕನ್ನ ಗಮನಿಸಿದ್ದಾನೆ. ಅಸಲಿಗೆ ಸುನಿಲ್ ನ ಸ್ನೇಹಿತನೂ ಆಗಿದ್ದ ಸಂತೋಷ್ ಫೇಸ್ ಬುಕ್ ಪೋಸ್ಟ್ ಸಹ ನೋಡಿದ್ದನು. ಕೂಡಲೇ ಬೈಕ್ ಸಮೇತ ಇಬ್ಬರನ್ನ ಅಡ್ಡಗಟ್ಟಿ ಪ್ರಶ್ನೆ ಮಾಡಿದ ಸಂತೋಷ್ ಹಾಗೂ ಸ್ಥಳೀಯರು ಕಳ್ಳರ ಸಮೇತ ಬೈಕನ್ನ ದೊಡ್ಡಬಳ್ಳಾಪುರ ನಗರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಸದ್ಯ ಚಿಂತಾಮಣಿಯಲ್ಲಿ ಕಳುವಾದ ಬೈಕ್ ದೊಡ್ಡಬಳ್ಳಾಪುರದಲ್ಲಿ ಫೇಸ್ ಬುಕ್ ಸಹಾಯದಿಂದ ಪತ್ತೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews