ಬೆಂಗಳೂರು: ವೀಕೆಂಡ್ ನಲ್ಲಿ ಲಾಲ್ ಬಾಗ್ ಫ್ಲವರ್ ಶೋ ನೋಡಲು ಬರುವವರಿಗೆ ನಮ್ಮ ಮೆಟ್ರೋ ಬಂಪರ್ ಆಫರ್ ವೊಂದನ್ನು ನೀಡಿದೆ.
ನಮ್ಮ ಮೆಟ್ರೋ ಕೇವಲ 30 ರೂಪಾಯಿಯಲ್ಲಿ ಎರಡು ಬದಿಯ ಪ್ರಯಾಣಕ್ಕೆ ಅವಕಾಶ ನೀಡಿದೆ. 30 ರೂ. ಪೇಪರ್ ಟಿಕೆಟ್ ಮೂಲಕ ಲಾಲ್ ಬಾಗ್ ಗೆ ಹೋಗಿ ವಾಪಸ್ ಬರಬಹುದು. ಅಷ್ಟೇ ಅಲ್ಲದೇ ಲಾಲ್ ಬಾಗ್ ನಿಂದ ನಗರದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಹೋಗಿ ವಾಪಸ್ ಆಗಬಹುದು.
ಈ ಆಫರ್ ವೀಕೆಂಡ್ ನಲ್ಲಿ ಅಂದ್ರೆ ದಿನಾಂಕ 11, 12, 15 ರಂದು ಮಾತ್ರ ಅನ್ವಯವಾಗುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು 30 ರೂ. ನಲ್ಲಿ ಲಾಲ್ ಬಾಗ್ ಹೋಗಿ ವಾಪಸ್ ಬರಬಹುದು. ಸ್ಮಾರ್ಟ್ ಕಾರ್ಡ್ ಬಳಕೆ ಮಾಡುವರಿಗೂ ಸಾಮಾನ್ಯ ದರ ಅನ್ವಯವಾಗಲಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews