ಚಿಕ್ಕಬಳ್ಳಾಪುರ: ಪ್ಲಾಸ್ಟಿಕ್ ಹಾಗೂ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಇದೇ ಮೊದಲ ಬಾರಿಗೆ ಕೆಡಿಪಿ ಸಭೆಯಲ್ಲಿ ಮಿನರಲ್ ವಾಟರ್ ಪ್ಲಾಸ್ಟಿಕ್ ಬಾಟಲಿ ನೀಡುವ ಬದಲು ಪೇಪರ್ ಲೋಟಾ ಮೂಲಕ ನೀರು ವಿತರಣೆಗೆ ಮುಂದಾಗಿದೆ.
ಕಳೆದ ಸಭೆಗಳಲ್ಲಿ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಸಭೆಯಲ್ಲಿ ಭಾಗಿಯಾಗುತ್ತಿದ್ದ ಎಲ್ಲರಿಗೂ 500 ಎಂಎಲ್ ನ ಪ್ಲಾಸ್ಟಿಕ್ ಮಿನರಲ್ ವಾಟರ್ ಬಾಟಲಿ ನೀಡಲಾಗುತ್ತಿತ್ತು.
ಆದರೆ ಈ ಸಭೆಯಲ್ಲಿ ಜನಪ್ರತಿನಿಧಿಗಳು, ಡಿಸಿ, ಎಡಿಸಿ, ಎಸ್ಪಿ, ಹಾಗೂ ಸಿಇಓಗೆ ಗಾಜಿನ ಲೋಟದ ಮೂಲಕ ನೀರು ನೀಡಲಾಗಿದ್ದು, ಉಳಿದವರೆಲ್ಲರಿಗೂ ಪೇಪರ್ ಲೋಟದ ಮೂಲಕ ನೀರು ವಿತರಣೆ ಮಾಡಲಾಯಿತು. ಆಸಲಿಗೆ ಈ ಹಿಂದೆ ಸಭೆಯಲ್ಲೆಲ್ಲಾ ಬರೀ ಪ್ಲಾಸ್ಟಿಕ್ ಬಾಟಲಿಗಳೇ ತುಂಬಿ ಹೋಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಾಂಭಿಕಾದೇವಿ ಪ್ಲಾಸ್ಟಿಕ್ ಬಾಟಲಿಗೆ ಬ್ರೇಕ್ ಹಾಕುವಂತೆ ಆದೇಶ ಹೊರಡಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews