ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆದಿವಾಸಿ ದಿನಾಚರಣೆ ಬಿಟ್ಟು ಮಗ ನಿಖಿಲ್ ಸಿನಿಮಾದ ಶೂಟಿಂಗ್ ನೋಡಲು ಹೋಗಿದ್ದರು.
24ನೇ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ಅಲೆಮಾರಿ ಆದಿವಾಸಿಗಳ ಕಲಾಮೇಳದ ಉದ್ಘಾಟನಾ ಕಾರ್ಯಕ್ರಮ ವಸಂತನಗರ ಅಂಬೇಡ್ಕರ್ ಭವನದಲ್ಲಿ ಗುರುವಾರ 11.30ಕ್ಕೆ ನಿಗದಿಯಾಗಿತ್ತು. ಆಧಿಕಾರಿಗಳು ಈಗ ಸಿಎಂ ಬರುತ್ತಾರೆ ಎಂದು ಸಿದ್ಧತೆ ನಡೆಸಿ ಕಾಯುತ್ತಿದ್ದರು. ಆದರೆ ಸಿಎಂ ಮಗ ನಿಖಿಲ್ ಸಿನಿಮಾದ ಶೂಟಿಂಗ್ ನೋಡಲು ಹೋಗಿದ್ದರು. ಕೊನೆಗೆ ಸಿಎಂ ಅನುಪಸ್ಥಿತಿಯಲ್ಲಿ ವಿಶ್ವ ಆದಿವಾಸಿ ದಿನಾಚರಣೆ ಆರಂಭವಾಯಿತು. ಕೊನೆಗೆ ಮಧ್ಯಾಹ್ನ 2.10 ನಿಮಿಷಕ್ಕೆ ಆಗಮಿಸಿ ಸಿಎಂ ಈ ಕಾರ್ಯಕ್ರಮದಲ್ಲಿ ಭಾಗಿಯಾದರು.
ನಟ ನಿಖಿಲ್ ಅಭಿನಯದ `ಸೀತಾರಾಮ ಕಲ್ಯಾಣ’ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ನಗರದ ಪ್ಯಾಲೇಸ್ ಗ್ರೌಂಡ್‍ನಲ್ಲಿ ನಡೆಯುತ್ತಿತ್ತು. ಪುತ್ರ ವ್ಯಾಮೋಹದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಕೂಡಲೇ ತಕ್ಷಣ ಎಚ್ಚೆತ್ತುಕೊಂಡ ಕುಮಾರಸ್ವಾಮಿ ಅವರು ನಿಗದಿಯಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಆರಂಭದಲ್ಲೇ ಕ್ಷಮೆ:
ವೈಯಕ್ತಿಕ ಕಾರ್ಯಕ್ರಮಕ್ಕೆ ಹೋಗಬೇಕಾಯಿತು. ಹೀಗಾಗಿ ಕಾರ್ಯಕ್ರಮಕ್ಕೆ ಬರೋದು ತಡವಾಗಿತ್ತು. ಆದ್ದರಿಂದ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರುತ್ತಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಆರಂಭದಲ್ಲೇ ಕ್ಷಮೆ ಕೇಳಿದರು.
ಮಗನ ಕಾರ್ಯಕ್ರಮಕ್ಕೆ ಹೋಗಿದ್ದೇನೆ ಅಂತ ಮಾಧ್ಯಮಗಳು ವರದಿ ಮಾಡುತ್ತಿವೆ. ಒಬ್ಬ ತಂದೆಯಾಗಿ ಮಗನ ಜೀವನ ರೂಪಿಸಬೇಕಾದ ಕರ್ತವ್ಯವೂ ನಮ್ಮ ಮೇಲಿದೆ. ಆದ್ದರಿಂದ ನಾನು ತಂದೆಯಾಗಿ ನನ್ನ ಕರ್ತವ್ಯ ಮಾಡಬೇಕು. ದಿನದ 24 ಗಂಟೆ ಅವನ ಜೊತೆ ನಾನು ಇರುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಅವನ ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ಕಷ್ಟ ನನಗೆ ಗೊತ್ತು. ಯಾವುದನ್ನು ಹೇಳಿಕೊಳ್ಳುವ ಸ್ಥಿತಿಯಲ್ಲಿ ನಾನು ಇಲ್ಲ ಎಂದು ಮಾಧ್ಯಮಗಳ ಮೇಲೆ ಮತ್ತೆ ಆಕ್ರೋಶಗೊಂಡರು.
ಇತ್ತೀಚೆಗೆ ರಾಮನಗರದಲ್ಲಿ ನಾಡದೇವತೆ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ `ಸೀತಾರಾಮ ಕಲ್ಯಾಣ’ ಸಿನಿಮಾ ಟೀಸರನ್ನು ಕೂಡ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ್ದರು. ಟೀಸರ್ ನಲ್ಲಿ ಆ್ಯಯಕ್ಷನ್ ಸೀನ್‍ಗಳೇ ಅಧಿಕವಾಗಿದ್ದು, ಆ್ಯಯಕ್ಷನ್ ಸೀನ್ ಇಷ್ಟಪಡುವ ಅಭಿಮಾನಿಗಳಿಗೆ `ಸೀತಾರಾಮ ಕಲ್ಯಾಣ’ ಮನರಂಜನೆ ನೀಡಿತ್ತು. ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ 2ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿಕೊಂಡಿದ್ದು, ಯೂಟ್ಯೂಬ್‍ನಲ್ಲಿ ಟಾಪ್ 1 ಟ್ರೆಂಡಿಂಗ್ ನಲ್ಲಿತ್ತು.
`ಸೀತಾರಾಮ ಕಲ್ಯಾಣ’ ಸಿನಿಮಾ ಹರ್ಷ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದು, ಚಿತ್ರದಲ್ಲಿ ರಚಿತಾ ರಾಮ್ ಮೊದಲ ಬಾರಿಗೆ ನಿಖಲ್ ಅವರಿಗೆ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ.