ರಾಷ್ಟ್ರಗೀತೆ ವೇಳೆ ವ್ಹೀಲ್ ಚೇರ್ ಬಿಟ್ಟು ಎದ್ದುನಿಂತ 10ರ ಬಾಲಕ!- ವಿಡಿಯೋ ನೋಡಿ

Public TV
1 Min Read
BOY WHEELCHAIR

ನ್ಯೂಯಾರ್ಕ್: ಜಾತ್ರೆಯ ವೇಳೆ ರಾಷ್ಟ್ರಗೀತೆ ಮೊಳಗಿದ ಸಂದರ್ಭದಲ್ಲಿ 10 ವರ್ಷದ ಬಾಲಕನೊಬ್ಬ ವ್ಹೀಲ್ ಚೇರ್ ಬಿಟ್ಟು ಎದ್ದು ನಿಂತು ಗೌರವ ಕೊಟ್ಟ ಮನಕಲಕುವ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ.

ಈ ಘಟನೆ ಅಮೆರಿಕಾದ ಪುಟ್ನಮ್ ಕೌಂಟಿಯ ಟೆನ್ನೀಸ್ಸೀ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. ಆವೆರಿ ಪ್ರೈಸ್, ಯಾವುದೇ ಆಧಾರಗಳಿಲ್ಲದೆ ರಾಷ್ಟ್ರಗೀತೆ ವೇಳೆ ಎದ್ದು ನಿಂತ ಬಾಲಕ. ಈ ದೃಶ್ಯವನ್ನು ಅಲ್ಲೆ ಇದ್ದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದಾರೆ.

ಪ್ರೈಸ್ ಅನುವಂಶೀಯ ಕಾಯಿಲೆ spastic paraplegia (HSP) syndrome ದಿಂದ ಬಳಲುತ್ತಿದ್ದಾನೆ. ಹೀಗಾಗಿ ಈತನಿಗೆ ನಿಲ್ಲಲು ಅಸಾಧ್ಯವಾಗಿತ್ತು. ವ್ಹೀಲ್ ಚೇರ್ ಮೂಲಕವೇ ಸಂಚರಿಸುತ್ತಿದ್ದನು. ಭಾನುವಾರ ಸಂಜೆ ಜಾತ್ರೆಯ ವೇಳೆ ರಾಷ್ಟ್ರಗೀತೆಯೊಂದು ಮೊಳಗಿದೆ. ಪರಿಣಾಮ ಅದಕ್ಕೆ ಗೌರವ ಸಲ್ಲಿಸಲೆಂದು ವ್ಹೀಲ್ ಚೇರ್ ಬಿಟ್ಟು ಯಾವುದೇ ಆಧಾರಗಳಿಲ್ಲದೆ ಎದ್ದು ನಿಂತಿದ್ದಾನೆ.

d112d059 daf2 4c8f ba30 12156b0fc095

ಆವೆರಿಗೆ ಇರುವ ಕಾಯಿಲೆಯಿಂದಾಗಿ ಆತನಿಗೆ ನಿಂತುಕೊಳ್ಳಲು ಕಷ್ಟ ಸಾಧ್ಯವಾಗುತ್ತಿತ್ತು. ಆದ್ರೂ ಆತ ಧೈರ್ಯ ಮಾಡಿ ದೇಶ ಪ್ರೇಮವನ್ನು ಮೆರೆದಿದ್ದಾನೆ. `ಯಾವತ್ತೂ ನಾನು ಕುಳಿತುಕೊಂಡೇ, ಎದೆಗೆ ಕೈ ಹಿಡಿದುಕೊಂಡು ಗೌರವ ಸೂಚಿಸುತ್ತಿದ್ದೆನು. ಆದ್ರೆ ಈ ಬಾರಿ ಹಾಗೆ ಮಾಡಬಾರದೆಂದು ದಿಟ್ಟ ನಿರ್ಧಾರ ಕೈಗೊಂಡಿದ್ದೇನು. ಯಾಕೆಂದರೆ ನನ್ನ ದೇಶಕ್ಕಾಗಿ ನಾನು ಎದ್ದು ನಿಲ್ಲಲೇಬೇಕು. ಹೀಗಾಗಿ ಇಂದು ಎದ್ದು ನಿಂತು ಗೌರವ ಸೂಚಿಸಿದ್ದೇನೆ ಅಂತ ಆವೆರಿ ತಿಳಿಸಿದ್ದಾನೆ. ಮಗನ ಈ ನಿರ್ಧಾರದಿಂದ ಆತನ ಪೋಷಕರು ಕೂಡ ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ.

ನನ್ನ ಮಗ ಮಾಡಿದ ಕಾರ್ಯ ನನಗೆ ನಿಜಕ್ಕೂ ಹೆಮ್ಮೆ ಅನಿಸುತ್ತಿದೆ. ಅವನೇನು ಅಂದುಕೊಂಡಿರುತ್ತಾನೆಯೋ ಅದನ್ನು ಆತ ಮಾಡಿಯೇ ಮಾಡುತ್ತಾನೆ. ಇದು ನನಗೆ ತುಂಬಾ ಅಚ್ಚರಿಯೂ ತಂದಿದೆ. ಒಟ್ಟಿನಲ್ಲಿ ನನ್ನ ಮಗ ತುಂಬಾನೇ ದೇಶಪ್ರೇಮಿ. ಅವನು ಅದೇ ರೀತಿ ಇರಲು ನಾನು ಬಯಸುತ್ತೇನೆ ಅಂತ ಆವೆರಿ ತಂದೆ ತಿಳಿಸಿದ್ದಾರೆ.

ಜಾತ್ರೆಯಲ್ಲಿ ಕಲಾವಿದ ಜೆನ್ನಿ ಲೇಘ್ ಎಂಬವರು ರಾಷ್ಟ್ರಗೀತೆಯನ್ನು ಹಾಡಿದ್ದು, ಈ ವೇಳೆ ಆವೆರಿ ದೇಶಪ್ರೇಮವನ್ನು ಕಂಡು ಹೌಹಾರಿದ್ದಾರೆ. ನಾಶ್ವಿಲ್ಲೆ ಮೆಡಿಕಲ್ ಸೆಂಟರ್ ನಲ್ಲಿ ಇತ್ತೀಚೆಗೆ ಆವೆರಿಗೆ ಸರ್ಜರಿಯೊಂದು ನಡೆದಿತ್ತು. ಆ ಬಳಿಕದಿಂದ ಆತ ನಡೆಯಲು ಪ್ರಯತ್ನ ಪಡುತ್ತಿದ್ದಾನೆ.

https://www.facebook.com/leah.norris.792/videos/vb.100003324466640/1779887098798755/?type=2&video_source=user_video_tab

Share This Article
Leave a Comment

Leave a Reply

Your email address will not be published. Required fields are marked *