ತುಮಕೂರು: ಪತ್ನಿ ಬಚ್ಚಲು ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದನ್ನು ಕಂಡ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದ ಹಳ್ಳಿಕಾರ್ ಬೀದಿಯಲ್ಲಿ ನಡೆದಿದೆ.
ಮೀನಾಕ್ಷಿ(23) ಹಾಗೂ ಉಮೇಶ್(28) ಮೃತ ದಂಪತಿ. ಕಳೆದ ಎರಡು ವರ್ಷದ ಹಿಂದೆಯಷ್ಟೇ ಮೀನಾಕ್ಷಿ ಹಾಗೂ ಉಮೇಶ್ ಮದುವೆಯಾಗಿತ್ತು. ಪತ್ನಿ ಮೀನಾಕ್ಷಿ ಬಚ್ಚಲು ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನಪ್ಪಿದ್ದಾರೆ.
ಇದನ್ನು ಕಂಡ ಪತಿ ಉಮೇಶ್ ಕೂಡ ಮದ್ಯದಲ್ಲಿ ಕಿಟನಾಶಕ ಬೆರೆಸಿಕೊಂಡು ಕುಡಿದಿದ್ದಾರೆ. ತಕ್ಷಣ ಉಮೇಶ್ ಅವರನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಉಮೇಶ್ ಕೂಡ ಮೃತಪಟ್ಟಿದ್ದಾರೆ. ಸದ್ಯ ಈ ಬಗ್ಗೆ ತುರುವೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.