ಕೋಲಾರ: ಶಾಲಾ ಬಾಲಕಿ ಅತ್ಯಾಚಾರ ಯತ್ನ, ಕೊಲೆ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಕೋಲಾರ ಪೊಲೀಸರು ಯುವಕರ ಶೋಕಿಗಳಿಗೆ ಬ್ರೇಕ್ ಹಾಕಿ ಶಿಸ್ತಿನ ಬುದ್ಧಿ ಕಲಿಸುತ್ತಿದ್ದಾರೆ.
ಸ್ಟೈಲಿಷ್ ಗಡ್ಡದಾರಿಗಳಿಗೆ, ಪುಂಡ ಪೋಕರಿಗಳನ್ನು ಅಟ್ಟಗಟ್ಟಿ ಖುದ್ದು ಪೊಲೀಸರೇ ತಲೆ ಬೋಳಿಸಿ ಸಮಾಜದಲ್ಲಿ ಶಿಸ್ತಾಗಿರುವಂತೆ ಸಂದೇಶ ರವಾನೆ ಮಾಡುತ್ತಿದ್ದರೆ. ಚಿತ್ರ ವಿಚಿತ್ರ ಗಡ್ಡ, ತಲೆಗೂದಲು ಬಿಟ್ಟ ಯುವಕರನ್ನು ಹಿಡಿದು ಮಾಲೂರು ಪೊಲೀಸರು ಸಲ್ಯೂನ್ ಗೆ ಕರೆದುಕೊಂಡು ಹೋಗಿ ಖುದ್ದು ಶೇವಿಂಗ್, ಹೇರ್ ಕಟ್ ಮಾಡಿಸಿ ಯುವಕರಿಗೆ ಅರಿವು ಮೂಡಿಸುತ್ತಿದ್ದಾರೆ.
ಕಳೆದ ಗುರುವಾರ ಮಾಲೂರು ಪಟ್ಟಣದಲ್ಲಿ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಬಾಲಕಿ ಹತ್ಯೆ ಪ್ರಕರಣ ನಂತರ ಎಚ್ಚೆತ್ತುಕೊಂಡಿರುವ ಮಾಲೂರು ಪೊಲೀಸ್ ಇಲಾಖೆ ಯುವಕರಿಗೆ ಶಿಸ್ತಿನ ಪಾಠ ಕಲಿಕೆಗೆ ಮುಂದಾಗಿದ್ದಾರೆ.
ಪುಂಡ ಪೋಕರಿಗಳನ್ನು ಮಟ್ಟ ಹಾಕಲು ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ರೋಡ್ ರೋಮಿಯೋ, ಬೈಕ್ ವಿಲ್ಹೀಂಗ್ ಮಾಡುವ ಯುವಕರನ್ನು ಪತ್ತೆ ಹಚ್ಚಿ ಶಿಸ್ತಿನ ಪಾಠ ಕಲಿಸುತ್ತಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ಸಿಕ್ಕಿದೆ.