ನವದೆಹಲಿ: ಫೇಸ್‍ಬುಕ್ ನಲ್ಲಿ 200 ಮಹಿಳೆಯರಿಗೆ ತನ್ನ ನಗ್ನ ಫೋಟೋ ಕಳುಹಿಸಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯ್ ಬಂಧಿತ ಆರೋಪಿ. ಈತ ಫೇಸ್‍ಬುಕ್ ನಲ್ಲಿ ನಕಲಿ ಖಾತೆ ತೆರೆದು ಅದರ ಮೂಲಕ 200 ಮಹಿಳೆಯರಿಗೆ ತನ್ನ ಬೆತ್ತಲೆ ಫೋಟೋಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದನು. ಈಗ ಈತನನ್ನು ಗುರುಗ್ರಾಮ ಜಿಲ್ಲೆಯಲ್ಲಿರುವ ತನ್ನ ಮನೆಯಲ್ಲಿಯೇ ಹರಿಯಾಣ ಪೋಲೀಸರು ಬಂಧಿಸಿದ್ದಾರೆ.
ಆರೋಪಿ ವಿಜಯ್ ಯುವತಿಯ ಹೆಸರಲ್ಲಿ ಫೇಸ್‍ಬುಕ್ ನಲ್ಲಿ ನಕಲಿ ಖಾತೆ ತೆರೆದಿದ್ದಾನೆ. ಮೊದಲು ಎಲ್ಲರಿಗೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದನು. ನಂತರ ಅನೇಕ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಬಳಿಕ ಅವರಿಗೆ ತಿಳಿಯದಂತೆ ಅವರ ಪ್ರೊಫೈಲ್ ನಲ್ಲಿ ಅವರ ಫೋಟೋಗಳನ್ನು ಕದಿಯುತ್ತಿದ್ದನು ಎಂದು ಡಿಸಿಪಿ ಹೇಳಿದ್ದಾರೆ.
ಆರೋಪಿ ವಿಜಯ್ ಐಜಿಐಎ ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಯುವತಿ ಮತ್ತು ಪುರುಷರ ಹೆಸರಲ್ಲಿ ನಕಲಿ ಖಾತೆ ತೆರೆದು ಮಹಿಳೆಯರಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದನು. ಅನೇಕ ಮಹಿಳೆಯರು ಈತ ಯುವತಿ ಎಂದು ತಿಳಿದು ಸ್ನೇಹಿತೆ ಎಂದು ಸ್ವೀಕರಿಸಿದ್ದರು.
ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಂಡ ನಂತರ ತನ್ನ ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದಾನೆ. ಒಂದು ವೇಳೆ ಇದನ್ನು ಮಹಿಳೆಯರು ವಿರೋಧಿಸಿದರೆ ಅವರ ಫೋಟೋಗಳನ್ನು ನಗ್ನ ರೀತಿಯಲ್ಲಿ ಬದಲಿಸಿ ಅವರಿಗೆ ಕಳುಹಿಸುತ್ತಿದ್ದನು. ಜೊತೆಗೆ ಅಸಭ್ಯವಾಗಿ ಮೆಸೇಜ್ ಕೂಡ ಮಾಡಲು ಆರಂಭಿಸಿದ್ದನು ಎಂದು ಪೋಲೀಸರು ತಿಳಿಸಿದ್ದಾರೆ.
ಆರೋಪಿ ಸುಮಾರು ಮಹಿಳೆಯರನ್ನು ಸ್ನೇಹಿತರಾಗಿ ಮಾಡಿಕೊಂಡು ಅಸಭ್ಯವಾಗಿ ಚಾಟ್ ಮಾಡಿ ಕಿರುಕುಳ ನೀಡುತ್ತಿದ್ದನು. ಕೊನೆಗೆ ದೆಹಲಿ ಮೂಲದ ಮಹಿಳೆಯೊಬ್ಬರು ದೆಹಲಿಯ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ತನಿಖೆ ಮಾಡಿ ಆರೋಪಿಯನ್ನು ಈಗ ಬಂಧಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews