ಬೆಳಗಾವಿ: ಪ್ರತ್ಯೇಕ ರಾಜ್ಯದ ಪರ ನಿಲ್ಬೇಡಿ ಅಂತಾ ಬಿಎಸ್‍ವೈ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಇಂದು ಸಿಎಂ ಕುಮಾರಸ್ವಾಮಿ ಟೀಕಿಸೋ ಭರದಲ್ಲಿ ಬಿಜೆಪಿಯ ಮಾಜಿ ಮಂತ್ರಿ ಹಾಗೂ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯದ ಸುಳಿವು ನೀಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಮಗೆ ರಾಜ್ಯ ಕಟ್ಟೋದು ಗೊತ್ತು ನೀವು ಹೇಳುವ ಅವಶ್ಯಕತೆಯಿಲ್ಲ. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಯಾಗಬೇಕು. ಈ ಭಾಗದ ಅಭಿವೃದ್ಧಿ ಮಾಡದೇ ಇದ್ದಲ್ಲಿ ಪ್ರತ್ಯೇಕ ಹೋರಾಟ ಅನಿವಾರ್ಯ ಎಂದು ಬಹಿರಂಗವಾಗಿ ಹೇಳಿದ್ರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಕೊಡುಗೆ ಉತ್ತರ ಕರ್ನಾಟಕಕ್ಕೆ ಅಪಾರ ಇದೆ. ಕೃಷ್ಣಾ ಯೋಜನೆ ಬಿ ಸ್ಕೀಮ್ ಅನುಷ್ಠಾನ ಆಗಬೇಕು. 177 ಟಿಎಂಸಿ ನೀರು ಸದ್ಬಳಕೆ ಆಗಬೇಕು. ಕುಮಾರಸ್ವಾಮಿ ಸರಕಾರ ಹಾಗೂ ಸಿದ್ದರಾಮಯ ಸರಕಾರ ನಿರ್ಲಕ್ಷ್ಯ ಮಾಡಿವೆ. ಭಾಗದ ಅಭಿವೃದ್ಧಿ ಹೋರಾಟ ಮಾಡದೇ ಇದ್ದಲ್ಲಿ ಪ್ರತ್ಯೇಕ ಹೋರಾಟ ಅನಿವಾರ್ಯ ಅಂತ ಹೇಳಿದ್ದಾರೆ.