ಸ್ಟುಡಿಯೋದಲ್ಲಿ ನನ್ನನ್ನು ಮರೆತು ನಾನು ಹಾಡಿದ್ದೇನೆ: ಕಷ್ಟದ ದಿನ ನೆನೆದು ಭಾವುಕರಾದ ಗಂಗಮ್ಮ

Public TV
2 Min Read
THUMB Gangamma

ಬೆಂಗಳೂರು: ಸೋಶಿಯಲ್ ಮೀಡಿಯಾದ ಮೂಲಕವೇ ಸ್ಟಾರ್ ಆದ ಗಾನ ಕೋಗಿಲೆ ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡುವಾಗ ತಮ್ಮ ಕಷ್ಟದ ದಿನಗಳನ್ನು ನೆನದು ಭಾವುಕರಾದರು.

ಇಂದು ಹಾಡಿನ ರೆಕಾರ್ಡಿಂಗ್ ಮುಗಿಸಿ ಸ್ಟುಡಿಯೋದಿಂದ ಹೊರ ಬಂದ ಗಂಗಮ್ಮರನ್ನು ಪಬ್ಲಿಕ್ ಟಿವಿ ಮಾತನಾಡಿಸಿತ್ತು. ಇಂದು ಇಂತಹ ದೊಡ್ಡ ಸ್ಟುಡಿಯೋದಲ್ಲಿ ತುಂಬಾ ಖುಷಿಯಾಗಿದೆ. ನಾನು ಎಂದು ಇಷ್ಟು ದೊಡ್ಡ ಮಟ್ಟದಲ್ಲಿ ಬರುತ್ತೇನೆ ಎಂದು ಕಲ್ಪಿಸಿಕೊಂಡಿರಲಿಲ್ಲ. ಸ್ಟುಡಿಯೋದಲ್ಲಿ ನನ್ನನ್ನು ಮರೆತು ನಾನು ಹಾಡಿದ್ದೇನೆ ಎಂದರು.

ನಾನು ಕೊಪ್ಪಳದಿಂದ ಬೆಂಗಳೂರಿಗೆ ಬರುವಾಗ, ನಮ್ಮ ತಾಯಿ ಸಿನಿಮಾ ಅಥವಾ ಆರ್ಕೆಸ್ಟ್ರಾದಲ್ಲಿ ಆದರೂ ಎಲ್ಲೆ ಹಾಡಿದರೆ ಚೆನ್ನಾಗಿ ಹಾಡು ಅಂತಾ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ನಮ್ಮ ತಾಯಿ ಕೂಲಿ ಮಾಡಿ ತುಂಬಾ ಕಷ್ಟದಿಂದ ನಮ್ಮನ್ನು ಸಾಕಿದ್ದಾರೆ. ನಾವು ಒಟ್ಟು ಒಂಬತ್ತು ಮಕ್ಕಳು. ಸದ್ಯ 6 ಮಂದಿ ಮಾತ್ರ ಇದ್ದೇವೆ ಎಂದರು.

Gangamma 2

ನನಗೆ ಮದುವೆಯಾದ ವೇಳೆ ಬರಗಾಲ ಪರಿಸ್ಥಿತಿ ಎದುರಿಸಿದ್ದೇವು. ಗಂಡನ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಎದುರಿಸಬೇಕಾಯಿತು. ಈ ವೇಳೆ ತನ್ನ ಗಂಡನೊಂದಿಗೆ ಪ್ರತ್ಯೇಕ ಕುಟುಂಬ ಮಾಡಿದೆ. ಬಳಿಕ ನನ್ನ ಕುಟುಂಬದ ನಿರ್ವಹಣೆಯನ್ನ ಮಾಡಿ ಹಾಡುಗಾರಿಕೆಯನ್ನು ಮುಂದುವರಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹಳ್ಳಿ ಕೋಗಿಲೆ ಗಂಗಮ್ಮ ಗಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ!

ಕೊಪ್ಪಳದ ಹಳ್ಳಿ ಕೋಗಿಲೆ ಗಂಗಮ್ಮ ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಲಭಿಸಿ ‘ಪರದೇಸಿ ಕೇರ್ ಆಫ್ ಲಂಡನ್’ ಚಿತ್ರದ ಮೂಲಕ ಗಾಯಕಿಯಾಗಿ ಸಿನಿರಂಗ ಪ್ರವೇಶ ಮಾಡಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರ ಸ್ಟುಡಿಯೋದಲ್ಲಿ ಗಂಗಮ್ಮ ಅವರ ಹಾಡು ರೆಕಾರ್ಡಿಂಗ್ ನಡೆಯಿತು. ಅಲ್ಲದೇ ಗಂಗಮ್ಮ ತಮ್ಮ ಮೊದಲ ಹಾಡು ಪೂರ್ಣಗೊಳಿಸುವ ವೇಳೆಗೆ ಮತ್ತೆ ಎರಡೂ ಸಿನಿಮಾದ ನಿರ್ದೇಶಕರು ಬಂದು ತಮ್ಮ ಸಾಹಿತ್ಯಕ್ಕೆ ಇವರ ಕಂಠ ಹೋಲುತ್ತಾ ಎಂದು ಪರೀಕ್ಷೆ ಆಗಮಿಸಿದ್ದರು.

Gangamma

ಇತ್ತೀಚಿಗೆ ಗಂಗಮ್ಮ ಅವರ ಹಾಡಿನ ವಿಡಿಯೋ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆ ಹಾಡು ಒಂದೇ ದಿನದಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ವ್ಯೂ ಆಗಿತ್ತು. ಅಲ್ಲದೇ ಸುಮಾರು 10 ಸಾವಿರ ಜನ ಇವರ ಹಾಡಿನ ವಿಡಿಯೋ ಪೋಸ್ಟ್ ಅನ್ನು ಶೇರ್ ಮಾಡಿದ್ದರು. ಇದನ್ನೂ ಓದಿ: ಕೇವಲ 24 ಗಂಟೆಯಲ್ಲಿ 5 ಲಕ್ಷ ವೀವ್ಸ್, 10 ಸಾವಿರ ಶೇರ್ ಆಯ್ತು ಕೊಪ್ಪಳದ ಹಾಡು ಕೋಗಿಲೆಯ ವಿಡಿಯೋ!

ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಸಂಗೀತಾ ನಿರ್ದೇಶಕ ಅರ್ಜುನ್ ಜನ್ಯ, ಗಂಗಮ್ಮ ಅವರ ಹಾಡನ್ನು ಕೇಳಿ ಸಂಗೀತಕ್ಕೆ ವಯಸ್ಸು ಇರಲ್ಲ ಎಂಬುದು ತಿಳಿಯಿತು. ತುಂಬಾ ಚೆನ್ನಾಗಿ ಹಾಡುತ್ತಿದ್ದು ಅವರಿಗೆ 20 ವರ್ಷ ಅನುಭವವಿರುವುದು ಅವರ ಹಾಡು ಕೇಳಿ ತಿಳಿಯುತ್ತದೆ. ಗಂಗಮ್ಮ ಹಾಗೂ ಅವರ ಕುಟುಂಬಕ್ಕೆ ನಾನು ಶುಭಾಶಯ ತಿಳಿಸುತ್ತೇನೆ ಎಂದಿದ್ದರು.

 

Share This Article
1 Comment

Leave a Reply

Your email address will not be published. Required fields are marked *