ಮನೆಗೆ ಬಂದಿದ್ದ ಜಿಂಕೆ ಮರಿಯ ರಕ್ಷಣೆ

Public TV
1 Min Read
DEER

ಧಾರವಾಡ: ಕುರಿ ಕಾಯಲು ಅರಣ್ಯಕ್ಕೆ ಹೋದ ವೇಳೆ ಕುರಿಗಳ ಹಿಂಡಿನಲ್ಲಿ ಸೇರಿಕೊಂಡು ಮನೆಗೆ ಬಂದಿದ್ದ ಜಿಂಕೆ ಮರಿಯನ್ನ ರಕ್ಷಣೆ ಮಾಡಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ವೆಂಕಟಾಪೂರ ಗ್ರಾಮದ ಮಹಿಳೆ ಅಮ್ಮಾಜಾನ್ ಅಗಸಿನಹಳ್ಳಿ ತನ್ನ ಕುರಿಗಳನ್ನ ಅರಣ್ಯದಲ್ಲಿ ಮೇಯಿಸಲು ಹೋಗಿದ್ದರು. ಈ ವೇಳೆ ತನ್ನ ತಾಯಿಯಿಂದ ತಪ್ಪಿಸಿಕೊಂಡಿದ್ದ ಜಿಂಕೆ ಮರಿಯೊಂದು ಕುರಿ ಹಿಂಡಿನಲ್ಲಿ ಸೇರಿಕೊಂಡು ಮಹಿಳೆಯ ಮನೆಗೆ ಬಂದಿತ್ತು.

ಸಂಜೆ ಜಿಂಕೆ ಮರಿಯನ್ನ ನೋಡಿದ ಅಮ್ಮಾಜಾನ್, ಒಂದು ದಿನ ಅದನ್ನು ಆರೈಕೆ ಮಾಡಿ ನಂತರ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಆ ಮರಿಯನ್ನ ಮತ್ತೆ ಅರಣ್ಯ ಬಿಟ್ಟು ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *