ಬಳ್ಳಾರಿ: ಹೊಸಪೇಟೆಯ ಟಿಬಿ ಡ್ಯಾಂ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಡ್ಯಾಂನಿಂದ ಪ್ರತಿನಿತ್ಯ ಸಾಕಷ್ಟು ನೀರನ್ನ ನದಿಗೆ ಹರಿಬಿಡಲಾಗುತ್ತಿದೆ. ಹೀಗಾಗಿ ಡ್ಯಾಂನಿಂದ ಕ್ರಷ್ಟ್ ಗೇಟ್‍ಗಳ ಮೂಲಕ ಹೊರಹೋಗುವ ನೀರಿನ ದೃಶ್ಯ ನಿಜಕ್ಕೂ ನಯನ ಮನೋಹರವಾಗಿದೆ.
ತುಂಗಭದ್ರಾ ಡ್ಯಾಂ ಜಿಲ್ಲೆಯ ಹೊಸಪೇಟೆಯಲ್ಲಿದೆ. ಈ ಜಲಾಶಯ ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ಆಂಧ್ರ ಪ್ರದೇಶದ ಹತ್ತಾರು ಜಿಲ್ಲೆಗಳ ಜೀವನಾಡಿಯಾಗಿದೆ. 60 ವರ್ಷಗಳ ಹಿಂದೆ ಕರ್ನಾಟಕ-ಆಂಧ್ರಪ್ರದೇಶದ ಸರ್ಕಾರಗಳೆರಡೂ ಜಂಟಿಯಾಗಿ ನಿರ್ಮಿಸಿರುವ ಈ ಜಲಾಶಯ ನಾಲ್ಕು ವರ್ಷಗಳ ನಂತರ ಭರ್ತಿಯಾಗಿದೆ. ಜಲಾಶಯದಲ್ಲೀಗ ನೂರು ಟಿಎಂಸಿ ನೀರು ಸಂಗ್ರಹವಾಗಿದ್ದು, ಡ್ಯಾಂಗೆ ಹರಿದುಬರುತ್ತಿರುವ ಒಳಹರಿವು ಹೆಚ್ಚಳವಾಗಿರುವುದರಿಂದ ನಿತ್ಯ ಸಾವಿರಾರು ಕ್ಯೂಸೆಕ್ ನೀರನ್ನ 33 ಕ್ರಷ್ಟ್ ಗೇಟ್‍ಗಳ ಮೂಲಕ ನದಿಗೆ ಹರಿಬಿಡಲಾಗುತ್ತಿದೆ. ಹಗಲಿನಲ್ಲಿ ನದಿಗೆ ಹರಿದು ಹೋಗುವ ನೀರನ್ನ ನೋಡುವುದೇ ಒಂದು ಮನಮೋಹಕ ದೃಶ್ಯವಾಗಿದೆ.
ಡ್ಯಾಂನಿಂದ ಹಗಲಿನಲ್ಲಿ ಹರಿದುಹೋಗುವ ನದಿ ನೀರಿನ ದೃಶ್ಯಗಳನ್ನು ನೋಡೋವುದಕ್ಕೂ ರಾತ್ರಿಯ ವೇಳೆ ಡ್ಯಾಂನಿಂದ ಹರಿದು ಹೋಗುವ ನೀರಿನ ದೃಶ್ಯಗಳನ್ನು ನೋಡುವುದಕ್ಕೆ ಭಾರೀ ವ್ಯತ್ಯಾಸವಿದೆ. ಹಗಲಿನಲ್ಲಿ ಹಾಲಿನಂತೆ ನೊರೆಯುಕ್ಕಿ ಹರಿಯುವ ನೀರು ರಾತ್ರಿಯಾದ್ರೆ ಬಣ್ಣ ಬಣ್ಣದ ಕಲರ್ ಕಲರ್ ನೀರನಂತೆ ಕಂಗೊಳಿಸುತ್ತದೆ. ಜಲಾಶಯದ 33 ಕ್ರಷ್ಟ್‍ಗೇಟ್‍ಗಳಿಗೆ ಮೆಟಲ್ ಅಲಾಯಡ್ ಲೈಟ್ಸ್‍ನ ವ್ಯವಸ್ಥೆ ಕಲ್ಪಿಸಿರುವ ಅಧಿಕಾರಿಗಳು 400 ವ್ಯಾಟ್ ಸಾಮಾಥ್ರ್ಯದ ಬಲ್ಬ್ ಗಳಿಂದ ನೀರಿನ ಅಂದವನ್ನ ಹೆಚ್ಚುವಂತೆ ಮಾಡಿದ್ದಾರೆ. ಹೀಗಾಗಿ ಕಳೆದ ಒಂದು ವಾರದಿಂದ ಜಲಾಶಯದಿಂದ ಹೊರಹೊಗುತ್ತಿರುವ ನೀರು ರಾತ್ರಿಯಾದ್ರೆ ಬಣ್ಣ ಬಣ್ಣದ ಬೆಳಕಿನೊಂದಿಗೆ ಕಲರ್ ಕಲರ್ ಆಗಿ ಕಾಣುವ ದೃಶ್ಯಗಳು ನೋಡುಗರ ಮೈಮನ ಸೆಳೆಯುವಂತೆ ಮಾಡಿದೆ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ.
ಜಲಾಶಯದಿಂದ ಹರಿದು ಹೋಗುವ ನೀರು ಬರೀ ಹಗಲಿನಲ್ಲಿ ಮಾತ್ರ ಅಂದವಾಗಿ ಕಂಡರೆ ಬಳ್ಳಾರಿಯ ಟಿಬಿ ಡ್ಯಾಂ ಜಲಾಶಯದಲ್ಲಿ ಮಾತ್ರ ರಾತ್ರಿಯಲ್ಲೂ ಈ ನೀರಿನ ಅಂದ ಚೆಂದ ನೋಡೋಕೆ ನಿಜಕ್ಕೂ ಎರಡು ಕಣ್ಣು ಸಾಲದಾಗಿದೆ. ಅಲ್ಲದೇ ಡ್ಯಾಂನ ಉದ್ಯಾನವನದಲ್ಲಿರುವ ಸಂಗೀತ ನೃತ್ಯ ಕಾರಂಜಿ ನಿತ್ಯ ಸಾವಿರಾರು ಪೇಕ್ಷಕರಿಗೆ ಸಂಜೆಯ ತಂಪನ್ನ ಸವಿಯಲು ಇಂಪಾದ ಸಂಗೀತದೊಂದಿಗೆ ಎಲ್ಲರ ಕಣ್ಮನ ಸೆಳೆಯುತ್ತಿರುವುದು ನಿಜಕ್ಕೂ ವಿಶೇಷವಾಗಿದೆ.