120 ಮಹಿಳೆಯರನ್ನ ರೇಪ್ ಮಾಡಿದ್ದ 60 ವರ್ಷದ ಸ್ವಾಮೀಜಿಯ ಬಂಧನ

Public TV
1 Min Read
Swamiji

-120 ಸೆಕ್ಸ್ ಸಿಡಿ ವಶಕ್ಕೆ ಪಡೆದ ಪೊಲೀಸರು

ಫತೇಹಬಾದ್: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ವಿಡಿಯೋ ವೈರಲ್ ಆದ ಬಳಿಕ ಸ್ವಾಮೀಜಿಯನ್ನು ಬಂಧಿಸಿರುವ ಘಟನೆ ಹರಿಯಾಣದ ಫತೇಹಬಾದ್ ಪ್ರದೇಶದಲ್ಲಿ ನಡೆದಿದೆ.

ಬಾಬಾ ಅಮರ್ ಪೂರಿ (60) ಬಂಧಿತ ಆರೋಪಿಯಾಗಿದ್ದು, ಸದ್ಯ ಈತನ ಮೇಲೆ 120 ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಸ್ವಾಮೀಜಿಯ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ಆತನಿಗೆ ಸಂಬಂಧಿಸಿದ ಕೆಲ ಪ್ರದೇಶಗಳ ಮೇಲೆ ದಾಳಿ ನಡೆಸಿ ಅನುಮಾನಸ್ಪದಾಗಿ ಕಂಡು ಬಂದ ಫೈಲ್ ಗಳನ್ನು ವಶಕ್ಕೆ ಪಡೆದಿದ್ದು, ಬಾಬಾ ವಿರುದ್ಧ ಇಬ್ಬರು ಮಹಿಳೆಯರು ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

Capture

ಅಂದಹಾಗೇ ಮಹಿಳೆ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಸ್ವಾಮೀಜಿ ಈ ದೃಶ್ಯಗಳನ್ನು ಸೆರೆ ಹಿಡಿದು ಬಳಿಕ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೇ ಈ ಸಂಬಂಧ ಪೊಲೀಸರು ದಾಳಿ ನಡೆಸಿದ ವೇಳೆ 120 ವಿಡಿಯೋ ಕ್ಲೀಪ್ ಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಂಧಿತ ಅಮರ್ ಪೂರಿ ಸ್ವಾಮೀಜಿ ಹರಿಯಾಣದ ಫತೇಹಬಾದ್ ನ ಬಾಬಾ ಬಾಲ್ಕಾನಾಥ್ ದೇವಾಲಯದ ಸ್ವಾಮೀಜಿಯಾಗಿದ್ದು, ಈತನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬಾಬಾ ವಿರುದ್ಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಸ್ವಾಮೀಜಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ಅತ್ಯಾಚಾರದ ದೃಶ್ಯಗಳ ಸಿಡಿಯನ್ನು ಸಹ ಪೊಲೀಸರಿಗೆ ಸಲ್ಲಿಸಿದ್ದಾರೆ. ಕಳೆದ 9 ತಿಂಗಳ ಹಿಂದೆಯಷ್ಟೇ ಮಹಿಳೆಯೊಬ್ಬರು ಸ್ವಾಮೀಜಿಯ ತಮ್ಮ ಮೇಲೆ ದೇವಾಲಯದಲ್ಲೇ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ದೂರು ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *