ಸರ್ಕಾರ ನಡೆಸುವುದಂದ್ರೆ ಹೂವಿನ ಹಾಸಿಗೆಯಲ್ಲ, ಅದೊಂದು ಮುಳ್ಳಿನ ಹಾಸಿಗೆ- ಸಿಎಂ ಕಣ್ಣೀರಿಗೆ ಜಾರ್ಜ್ ಸಮರ್ಥನೆ

Public TV
2 Min Read
HDK GEORGE

– ಅರುಣ್ ಜೇಟ್ಲಿ ಟ್ವೀಟ್ ಗೆ ಜಾರ್ಜ್ ಟಾಂಗ್

ಬೆಳಗಾವಿ: ಕಾಂಗ್ರೆಸ್ಸಿನವರಿಂದ ಯಾವುದೇ ಒತ್ತಡವಿಲ್ಲ ಎಂದು ಕುಮಾರಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ. ಸಿಎಂ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ಕಣ್ಣೀರು ಹಾಕಿದ್ದಾರೆ. ಕುಮಾರಸ್ವಾಮಿ ವೀಕ್ ಅಲ್ಲಾ ಅವರು ಸ್ಟ್ರಾಂಗ್ ಇದ್ದಾರೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ, ಐಟಿ ಬಿಟಿ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ ಕಣ್ಣೀರು ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ ನಡೆಸುವುದಂದ್ರೆ ಹೂವಿನ ಹಾಸಿಗೆಯಲ್ಲ ಅದೊಂದು ಮುಳ್ಳಿನ ಹಾಸಿಗೆ. ಯಾರೇ ಮುಖ್ಯಮಂತ್ರಿಯಾದ್ರೂ ಸರ್ಕಾರ ನಡೆಸುವುದು ಸುಲಭವಲ್ಲ. ಸಿಎಂ ಹುದ್ದೆ ಎನ್ನುವುದು ಎಂಜಾಯ್ ಮಾಡುವ ಹುದ್ದೆಯಲ್ಲ. ಎಲ್ಲಾ ಸಿಎಂಗಳಿಗೂ ಸರ್ಕಾರ ನಡೆಸುವಾಗ ಕಷ್ಟ ಇದ್ದೇ ಇರುತ್ತೆ. ಕೆಲವೊಬ್ಬರು ನೋವು ಒಳಗಡೆ ಇಟ್ಟುಕೊಳ್ಳುತ್ತಾರೆ ಇವರು ಕಣ್ಣೀರಿನ ಮೂಲಕ ಹೊರ ಹಾಕಿದ್ದಾರೆ ಅಷ್ಟೇ ಅಂತ ಹೇಳಿದ್ರು. ಇದನ್ನೂ ಓದಿ: ದೇವೇಗೌಡರಿಗೆ ಆದ ಸ್ಥಿತಿಯೇ ಕುಮಾರಸ್ವಾಮಿಗೂ ಆಗಲಿದೆ : ಸಮ್ಮಿಶ್ರ ಸರ್ಕಾರದ ವಿರುದ್ಧ ಅರುಣ್ ಜೇಟ್ಲಿ ವ್ಯಂಗ್ಯ

ಮಾಧ್ಯಮ ಮಿತ್ರರು ಸಿಎಂ ಅವರ ಒಂದೊಂದು ವಿಷಯ ತೆಗೆದು ಹೈಲೆಟ್ ಮಾಡುವ ಬದಲು ಮನಸ್ಸು ಮಾಡಿದ್ರೆ ಒಳ್ಳೆ ರೀತಿಯಿಂದ ತೋರಿಸಬಹುದು. ಸಿಎಂ ಜನಪರ ಇದ್ದಾರೆ. ಜನರ ನೋವು ಒಳಗಡೆ ತೆಗೆದುಕೊಂಡಿದ್ದಾರೆ ಅಂತಾ ಹೇಳಬಹುದು. ಆದ್ರೇ ನೀವು ಸಿಎಂ ಅಳ್ತಾರೆ ಅಳ್ತಾರೆ ಅಂತಾ ಹೇಳಿದ್ರೇ ಹೇಗ್ ಆಗುತ್ತೆ. ಅಳು ಅವರ ಹೃದಯದಿಂದ ಬಂದಿದ್ದು, ಅವರೇನು ಅಶಕ್ತರೇನಲ್ಲ ಶಕ್ತರೆ ಅಂತ ಅವರು ತಿಳಿಸಿದ್ರು.

ಇದೇ ವೇಳೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಗೆ ಟಾಂಗ್ ಕೊಟ್ಟ ಜಾರ್ಜ್, ಜೇಟ್ಲಿಯವರು ಬಿಜೆಪಿಯವರು. ಕುಮಾರಸ್ವಾಮಿ ಸ್ಟ್ರಾಂಗ್ ಇದ್ದಾರೆ ಸಮ್ಮಿಶ್ರ ಸರ್ಕಾರ ಸ್ಟ್ರಾಂಗ್ ಆಗಿದೆ ಅಂತಾ ಬಿಜೆಪಿಯವರು ಹೇಳ್ತಾರಾ ಹೇಳಲ್ಲ. ಅವರು ರಾಜಕೀಯ ಉದ್ದೇಶ ಇಟ್ಟುಕೊಂಡೇ ಮಾತನಾಡುತ್ತಾರೆ. ಅವರ ಅಭಿಪ್ರಾಯ ಹೇಳಿದ್ದಾರೆ ಅದಕ್ಕೆಲ್ಲಾ ನಾವು ಉತ್ತರ ಕೊಡಲು ಆಗಲ್ಲ ಅಂದ್ರು. ಇದನ್ನೂ ಓದಿ: ನೀವು ಅತ್ತರೆ ನಮಗೂ ಅಳು ಬರುತ್ತೆ – ಹೆಚ್‍ಡಿಕೆಗೆ ಧೈರ್ಯ ತುಂಬಿದ ಹಾಸನ ಬಾಲಕಿ

ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಚಳುವಳಿ ಸಮರ್ಥಿಸಿಕೊಂಡ ಜಾರ್ಜ್, ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಿದ್ದಾರೆ. ಪತ್ರದ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಮಸ್ಯೆಗಳನ್ನ ಪತ್ರದ ಮೂಲಕ ಹೇಳುತ್ತಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *