ಕೋಲಾರ: ಅನ್ಯ ಕೋಮಿನ ಹುಡುಗಿಯನ್ನ ಚುಡಾಯಿಸಿದ ಅರೋಪ ಹಿನ್ನೆಲೆ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಸೋಮವಾರ ರಾತ್ರಿ 10.30 ರ ಸುಮಾರಿಗೆ ನಡೆದಿದೆ.
ಕೋಲಾರದ ರೆಹಮತ್ ನಗರದಲ್ಲಿ ಅನ್ಯ ಕೋಮಿನ ಹುಡುಗಿಯನ್ನ ಸುರೇಶ್ ಎಂಬ ಯುವಕ ಚುಡಾಯಿಸಿದ ಹಿನ್ನೆಲೆ ಯುವತಿ ಕಡೆಯವರು ಗುಂಪಾಗಿ ಸ್ಥಳದಲ್ಲಿ ಜಮಾಯಿಸಿದ್ರು, ಮಾತ್ರವಲ್ಲದೆ ಗಲ್ ಪೇಟೆ ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ರು. ಇದರಿಂದ ಪರಿಸ್ಥಿ ಹತೋಟಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ರೆಹಮತ್ ನಗರದ ಸನ್ನಿ ಸ್ಟುಡಿಯೋದ ಸುರೇಶ್ ಎಂಬಾತನೆ ಯುವತಿಯನ್ನ ಚುಡಾಯಿಸದ ಆರೋಪದ ಮೇಲೆ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿಸಿದ ಹಿನ್ನೆಲೆ ಪೊಲೀಸ್ ಠಾಣೆ ಎದುರು ನೂರಾರು ಜನ ಜಮಾವಣೆಯಾಗಿದ್ದರು. ಜನರನ್ನು ಚದುರಿಸಲು ಪೊಲೀಸರಿಂದ ಲಘು ಪಾಠಿ ಪ್ರಹಾರ ನಡೆಸಿದರು. ಗಲ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಎಸ್ಪಿ ರಾಜೀವ್, ಎಸ್ಪಿ ರೋಹಿಣಿ ಕಠೋಚ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.