ಕುಮಾರಸ್ವಾಮಿಗೆ ಕಾಂಗ್ರೆಸ್ ವಿಷ ಕೊಟ್ಟಿಲ್ಲ, ಅಮೃತವನ್ನೇ ಕೊಟ್ಟಿದೆ: ಕೈ ಶಾಸಕ

Public TV
1 Min Read
sudhakar HD KUMARASWAMY

ಬೆಂಗಳೂರು: ವಿಷಕಂಠನಂತೆ ವಿಷ ನುಂಗಿಕೊಂಡು ಸರ್ಕಾರ ನಡೆಸುತ್ತಿದ್ದೇನೆ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರದ ಮಾತಿಗೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ವಿಷ ಕೊಟ್ಟಿಲ್ಲ. ಅಮೃತವನ್ನೇ ಕೊಟ್ಟಿದೆ. ನಾವು 80 ಮಂದಿ ಶಾಸಕರು. ನಮ್ಮ ಪಕ್ಷದ ಕಾರ್ಯಕ್ರಮ ಇಲ್ಲದೇ ಇದ್ದರೂ 37 ಶಾಸಕರಿರುವ ಜೆಡಿಎಸ್‍ಗೆ ಸಹಕಾರ ನೀಡಿದ್ದೇವೆ. ಸಿಎಂ ಆಗಿರುವ ನೀವು ಆರೂವರೆ ಕೋಟಿ ಜನರ ಕಣ್ಣೀರು ಒರೆಸಬೇಕು. ನೀವು ಅಳೋದು ಬೇಡ. ನೀವೇ ಅತ್ತರೆ ನಿಮ್ಮ ಕಣ್ಣೀರು ಒರೆಸೋರು ಯಾರು ಅಂತ ಸುಧಾಕರ್ ಪ್ರಶ್ನಿಸಿದ್ದಾರೆ.

vlcsnap 2018 06 25 16h13m15s167

ಇದೇ ವೇಳೆ ಕಾಂಗ್ರೆಸ್ ಪಕ್ಷ ಸಿಎಂ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುತ್ತದೆ ಎಂದು ತಿಳಿಸಿದ ಅವರು, ನಾವು ನಿಮ್ಮ ಹಿಂದೆ ಇದ್ದೇವೆ. ಕಷ್ಟ ಸುಖ ಇಬ್ಬರೂ ಹಂಚಿಕೊಳ್ಳೋಣ. ನಮ್ಮ ಕಾರ್ಯಕ್ರಮ ನಿಮಗೂ ಕೀರ್ತಿ ತರುತ್ತೆ. ರೈತರ ಸಾಲಮನ್ನಾ ಮಾಡಿರುವುದು ಎರಡು ಪಕ್ಷಗಳಿಗೆ ಕೀರ್ತಿ ತರಲಿದೆ ಎಂದರು.

ನಾನು ಸನ್ಯಾಸಿ ಅಲ್ಲ: ಸಮ್ಮಿಶ್ರ ಸರ್ಕಾರದಲ್ಲಿ ಪ್ರಮುಖ ಸಚಿವ ಸ್ಥಾನ ಸಿಗದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಅಧಿಕಾರ ಕೊಡಿ ಎಂದು ಕೇಳುವುದಕ್ಕೆ ಹೋಗಿಲ್ಲ. ಆದಾಗೆ ಬಂದರೆ ನಾನೇನು ಸನ್ಯಾಸಿ ಅಲ್ಲ. ಪಕ್ಷ ಕೊಟ್ಟ ಕೆಲಸ ಸಮರ್ಥವಾಗಿ ನಿಭಾಯಿಸುತ್ತೇನೆ. ಕೊಡದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *