ಕೊಪ್ಪಳ: ಕರ್ನಾಟಕ ಶ್ರೀಗಂಧದ ನಾಡು ಅಂತಾರೆ. ಆದ್ರೆ ಇತ್ತೀಚೆಗೆ ಶ್ರೀಗಂಧ ಕಡಿಮೆ ಆಗ್ತಿದೆ. ಆದ್ರೆ, ಬರದ ನಾಡು ಕೊಪ್ಪಳದ ಇವತ್ತಿನ ನಮ್ಮ ಪಬ್ಲಿಕ್ ಹೀರೋ ರಮೇಶ್ ಬಳೂಟಗಿ. ಬರೋಬ್ಬರಿ 100 ಎಕರೆಯಲ್ಲಿ ಶ್ರೀಗಂಧದ ಕೃಷಿ ಮಾಡಿ, ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ಹೌದು. ಕೊಪ್ಪಳದ ಕುಷ್ಟಗಿ ತಾಲೂಕಿನ ಮಂಡಲಮರಿ ಗ್ರಾಮದ ರಮೇಶ್ ಅವರು 2008ರಲ್ಲಿ 30 ಎಕರೆಯಲ್ಲಿ ಶ್ರೀಗಂಧ ಬೆಳೀತಿದ್ರು. ಆದ್ರೀಗ, ಬರೋಬ್ಬರಿ 100 ಎಕರೆಯಲ್ಲಿ ಶ್ರೀಗಂಧ ಬೆಳೆಯುತ್ತಿದ್ದಾರೆ. 3 ಸಾವಿರ ಶ್ರೀಗಂಧದ ಮರಗಳ ಜೊತೆಗೆ ರಕ್ತಚಂದನ, ಹೆಬ್ಬೇವು, ಸೀತಾಫಲ, ಸಪೋಟಾ, ಮಾವು ಸೇರಿದಂತೆ 6 ಸಾವಿರ ಇತರೆ ಜಾತಿ ಗಿಡಗಳನ್ನ ಬೆಳೆಸಿದ್ದಾರೆ.
ಬಿಬಿಎ ಓದಿರುವ ರಮೇಶ್ ಅವರು ಮೊದಲಿಗೆ ದಾಳಿಂಬೆ ಬೆಳೆದಿದ್ರು. ಆದ್ರೆ, ದುಂಡಾಣು ಅಂಗಮಾರಿ ರೋಗದಿಂದ ಹೈರಾಣಾಗಿ ಹೋದ್ರು. ಬಳಿಕ ನೆನಪಿಗೆ ಬಂದಿದ್ದೇ ಶ್ರೀಗಂಧದ ಕೃಷಿ. ರಮೇಶ್ ಅವರ ಈ ಉಪಾಯ ಕೇಳಿದ ಜನ ನಮ್ಮಲ್ಲಿ ಶ್ರೀಗಂಧ ಬೆಳೆಯೋದಕ್ಕಾಗುತ್ತಾ ಅಂತ ಹೀಯಾಳಿಸಿದ್ದುಂಟು. ಅದನ್ನೇ ಸವಾಲಾಗಿ ಸ್ವೀಕರಿಸಿದ ರಮೇಶ್ ಇದೀಗ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ರಮೇಶ್ ಅವರ ಈ ಗಂಧದ ಕೃಷಿ ನೋಡೋಕೆ ದೇಶ ವಿದೇಶದಿಂದ್ಲೂ ರೈತರು ಬಂದು ಹೋಗ್ತಿದ್ದಾರೆ. ಇವರ ಶ್ರೀಗಂಧ ಕೃಷಿ ಪ್ರೇರಣೆಯಿಂದ ನೂರಾರು ರೈತರು ಸಹ ಶ್ರೀಗಂಧ ಕೃಷಿಗೆ ಮುಂದಾಗಿದ್ದಾರೆ.
ಅಂದಹಾಗೆ, ರಮೇಶ್ ಅವರ ತೋಟದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಕೃಷಿ ಹೊಂಡವಿದೆ. ಹಚ್ಚಹಸಿರಿನ ಕಾನನದಂತೆ ಕಾಣ್ತಿರೋ ತೋಟದಲ್ಲಿ ಹಣ್ಣು ತಿನ್ನೋಕೆ ಪಕ್ಷಿಗಳು ಬರ್ತಿದ್ದು, ಸದಾ ಕಲರವವೂ ಇರುತ್ತೆ.
https://www.youtube.com/watch?v=mpe5YrTDdRc