ನಾನೇ ಸೂಪರ್ ಮ್ಯಾನ್ ಅಂತೀರಾ, ಕೆಲ್ಸಾನೇ ಮಾಡಲ್ಲ-ದೆಹಲಿ ಗವರ್ನರ್ ಗೆ ಸುಪ್ರೀಂ ಚಾಟಿ

Public TV
1 Min Read
DELHI SUPREME COURT

ನವದೆಹಲಿ: ನಾನೇ ಸೂಪರ್ ಮ್ಯಾನ್ ಎಂದು ಹೇಳುತ್ತೀರಿ, ಆದರೆ ಯಾವುದೇ ಕೆಲಸ ಮಾಡುವುದಿಲ್ಲ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಗುರುವಾರ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ ಕುರಿತು ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಂ.ಬಿ. ಲೋಕೂರ್ ಮತ್ತು ದೀಪಕ್ ಗುಪ್ತರ ದ್ವಿಸದಸ್ಯ ಪೀಠದಲ್ಲಿ ನಡೆಯಿತು.

ಈ ವೇಳೆ ಕಸದ ಸಮಸ್ಯೆಯನ್ನು ಸರಿಯಾಗಿ ನಿರ್ವಹಣೆ ಮಾಡದ್ದಕ್ಕೆ “ನನಗೆ ಅಧಿಕಾರ ಇದೆ, ನಾನೇ ಸೂಪರ್ ಮ್ಯಾನ್ ಎಂದು ನೀವು ಹೇಳುತ್ತೀರಿ. ಆದರೆ ನೀವು ಏನೂ ಕೆಲಸ ಮಾಡುವುದಿಲ್ಲ” ಎಂದು ಹೇಳಿ ಚಾಟಿ ಬೀಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಕಸ ವಿಲೇವಾರಿ ಸಂಬಂಧ ಸುಪ್ರೀಂ ಕೋರ್ಟ್ ಕೇಳಿದ್ದ ಸಮಯ ನಿಗದಿಗೆ ಸಮಪರ್ಕವಾದ ಉತ್ತರ ನೀಡದ್ದಕ್ಕೆ ಗರಂ ಆದ ನ್ಯಾಯಾಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

ಈ ಸಮಸ್ಯೆಗೆ ದೆಹಲಿ ಮಹಾನಗರ ಪಾಲಿಕೆ ಕಾರಣ ಎಂದು ನೀವು ಹೇಳುತ್ತೀರಿ. ಪಾಲಿಕೆಯ ನಿಯಂತ್ರಣ ನಿಮ್ಮಲ್ಲಿರುವಾಗ ನಾವು ಯಾಕೆ ಅವರನ್ನು ಪ್ರಶ್ನೆ ಮಾಡಬೇಕು. ಹೀಗಾಗಿ ಈ ಸಮಸ್ಯೆ ಪರಿಹಾರಕ್ಕೆ ಮಾರ್ಗಗಳನ್ನು ಹುಡುಕಿ ಎಂದು ಆದೇಶಿಸಿತು.

ರಾಷ್ಟ್ರ ರಾಜಧಾನಿಯ ಕಸದ ಸಮಸ್ಯೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೂರುವಂತಿಲ್ಲ. ಈ ವಿಚಾರದಲ್ಲಿ  ದೆಹಲಿ ಸಿಎಂ ಅವರನ್ನು ಎಳೆದು ತರಬೇಡಿ ಎಂದು ಹೇಳಿತು.

ಜುಲೈ 16ರ ಒಳಗಡೆ ಕಸ ವಿಲೇವಾರಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸಿ ಎಂದು ಕೋರ್ಟ್ ಲೆಫ್ಟಿನೆಂಟ್ ಗವರ್ನರ್ ಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.

Share This Article
Leave a Comment

Leave a Reply

Your email address will not be published. Required fields are marked *