ರಾಕಿಂಗ್ ಸ್ಟಾರ್ ಯಶ್ ಕೊಲ್ಲಲು ಸ್ಕೆಚ್!

Public TV
2 Min Read
YASH

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಕುಖ್ಯಾತ ರೌಡಿ ಸೈಕಲ್ ರವಿಯೇ ನಟ ಯಶ್ ಹತ್ಯೆಗೆ ಸಂಚು ಮಾಡಿದ್ದ. ಪೊಲೀಸರ ವಿಚಾರಣೆ ವೇಳೆ 2 ವರ್ಷಗಳ ಹಿಂದೆಯೇ ನಟ ಯಶ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಆಘಾತ ಸುದ್ದಿಯನ್ನು ಬಾಯಿಬಿಟ್ಟಿದ್ದಾನೆ.

2016 ರಲ್ಲಿ ಬರ್ತ್ ಡೇ ಕಾರ್ಯಕ್ರಮಕ್ಕೆಂದು ಯಶ್ ಕನಕಪುರ ಫಾರ್ಮ್ ಹೌಸ್‍ ಗೆ ಹೋಗಿದ್ದರು. ಅಲ್ಲಿ ಸೈಕಲ್ ರವಿ ಹಾಗೂ ಕೋದಂಡ ಸ್ಕೆಚ್ ಯಶ್ ಕೊಲೆ ಮಾಡಲು  ಮಾಡಿದ್ದರು. ಕೋದಂಡನ ಮೂಲಕ ಯಶ್ ಅವರನ್ನು ಕೊಲ್ಲಲು ಸ್ಕೆಚ್ ಹಾಕಲಾಗಿತ್ತು. ಸ್ಕೆಚ್ ರೀತಿಯಲ್ಲಿ ಕುಡಿದ ಮತ್ತಿನಲ್ಲಿಯೇ ಯಶ್ ಕಾರಿನ ಮೇಲೆ ಪುಡಿ ರೌಡಿಗಳು ಕಲ್ಲು ತೂರಾಟ ಮಾಡಿದ್ದರು. ಆದರೆ ಅಂದು ಯಶ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

yash

ಅಂದು ಯಶ್ ಹತ್ಯೆಗೆ ಮೊತ್ತೊಬ್ಬ ನಟನ ಕೈವಾಡ ಇದೆ ಎಂದು ಆರೋಪ ಕೇಳಿಬಂದಿದೆ. ಆದರೆ ನಟನ ಸಂಚಿನ ಬಗ್ಗೆಯೂ ಪೊಲೀಸರು ತೀವ್ರ ತನಿಖೆ ಮಾಡುತ್ತಿದ್ದಾರೆ. ಸದ್ಯಕ್ಕೆ ತನಿಖೆಯ ಯಾವುದೇ ಮಾಹಿತಿಯನ್ನು ಪೊಲೀಸರು ಬಹಿರಂಗ ಪಡಿಸುತ್ತಿಲ್ಲ.

ಕೋದಂಡ ಯಾರು? ಸದ್ಯಕ್ಕೆ ಕೋದಂಡ ಎಲ್ಲಿದ್ದಾನೆ ಎಂಬ ಸುಳಿಯೂ ಸಿಗುತ್ತಿಲ್ಲ. ಅವನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಕೋದಂಡ ಹಲವು ಪ್ರಕರಣಗಲ್ಲಿ ಬೇಕಾಗಿರುವ ಆರೋಪಿಯಾಗಿದ್ದು, ಇದುವರೆಗೂ ಪೊಲೀಸರ ಬಲೆಗೆ ಬಿದ್ದಿಲ್ಲ. ಕೋದಂಡ ಮತ್ತು ಸೈಕಲ್ ರವಿ ಇಬ್ಬರು ರೌಡಿಗಳಾಗಿದ್ದು, ವಿರೋಧಿಗಳಾಗಿದ್ದರು. ಆದರೆ ಒಬ್ಬರನ್ನು ಮುಗಿಸುವ ಸಲುವಾಗಿ ಇಬ್ಬರು ರಾಜಿ ಮಾಡಿಕೊಂಡಿದ್ದರು.

ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದ ಹಿನ್ನೆಲೆಯಲ್ಲಿ ನಿರ್ಮಾಪಕ ಜಯಣ್ಣ ಅವರ ಜೊತೆ ಹೋಗಿ ಯಶ್ ಕಮಿಷನರ್ ಕಚೇರಿಗೆ ಹೋಗಿ ಯಶ್ ಮೌಖಿಕ ದೂರು ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ. ದೂರಿನ ಆಧಾರದ ಮೇಲೆ ಮೈಸೂರು ಕರ್ನಾಟಕ ಭಾಗದಲ್ಲಿ ಬೆಂಗಳೂರಿನ ಕೆಲವು ರೌಡಿಗಳನ್ನು ವಶಕ್ಕೆ ಪಡೆದ ವಿಚಾರಣೆ ಮಾಡಿದ್ದು, ಜೈಲಿಗೂ ಕಳುಹಿಸಿದ್ದರು.

ಹತ್ಯೆಯ ಸಂಚಿನ ಪ್ರಕರಣ ಬೆಳಕಿಗೆ ಬಂದ ನಂತರ ಯಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ಈ ಬಗ್ಗೆ ಲೈವ್ ಆಗಿ ಮಾತನಾಡುತ್ತೇನೆ ಎಂದು ಯಶ್ ಹೇಳಿದ್ದಾರೆ. ಜೂನ್ 27 ರಂದು ಸಿಸಿಬಿ ಪೊಲೀಸರು ಶೂಟೌಟ್ ಮಾಡಿ ರೌಡಿ ಸೈಕಲ್ ರವಿಯನ್ನು ಬಂಧಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *