ಗೃಹಪ್ರವೇಶದಿಂದ ಹಿಂದಿರುಗ್ತಿದ್ದಾಗ ಲಾರಿ, ತೂಫಾನ್ ಮುಖಾಮುಖಿ ಡಿಕ್ಕಿ- 3 ಮಹಿಳೆಯರು ಸೇರಿ ಐವರ ದುರ್ಮರಣ

Public TV
1 Min Read
collage

ಮಂಗಳೂರು: ಲಾರಿ ಹಾಗೂ ತೂಫಾನ್ ಜೀಪ್ ಡಿಕ್ಕಿ ಹೊಡೆದು ಮೂವರು ಮಹಿಳೆಯರು ಸೇರಿ ಒಟ್ಟು ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 13 ಮಂದಿ ಗಾಯಗೊಂಡ ಘಟನೆ ಕರ್ನಾಟಕ ಗಡಿಭಾಗ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಉಪ್ಪಳದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66ರ ಉಪ್ಪಳ ಸಮೀಪದ ನಯಬಝಾರ್ ನಲ್ಲಿ ಇಂದು ಬೆಳಗ್ಗೆ 6 ಘಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮೃತರನ್ನು ಬೀಫಾತಿಮಾ(65), ಅಸ್ಮಾ(30), ನಸೀಮಾ(38), ಮುಸ್ತಾಕ್(41), ಇಮ್ತಿಯಾಝ್(35)ಎಂದು ಗುರುತಿಸಲಾಗಿದ್ದು, ಇವರು ಮಂಗಳೂರಿನ ತಲಪಾಡಿ ಸಮೀಪದ ಕೆ.ಸಿ ರೋಡು ಅಜ್ಜಿನಡ್ಕ ನಿವಾಸಿಗಳು ಎನ್ನಲಾಗಿದೆ.

MNG 1

ಭಾನುವಾರ ಕೇರಳದ ಪಾಲಕ್ಕಾಡ್ ನಲ್ಲಿ ಸಂಬಂಧಿಕರ ಗೃಹ ಪ್ರವೇಶಕ್ಕೆ ತೆರಳಿ ಇಂದು ಉಳ್ಳಾಲಕ್ಕೆ ಮರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಒಟ್ಟು ಜೀಪ್ ನಲ್ಲಿ 18 ಮಂದಿ ಪ್ರಯಾಣಿಸುತ್ತಿದ್ದರು. ಇದರಲ್ಲಿ 5 ಮಂದಿ ಅಪಘಾತ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನುಳಿದ ಮಕ್ಕಳು ಸೇರಿದಂತೆ 13 ಮಂದಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಸರಗೋಡು ಕಡೆ ತೆರಳುತ್ತಿದ್ದ ಲಾರಿಯ ಟಯರ್ ಸಿಡಿದದ್ದೇ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಮೃತದೇಹವನ್ನು ಮಂಗಲ್ಪಾಡಿ ಸಿ.ಎಚ್.ಸಿ ಶವಾಗಾರದಲ್ಲಿ ಇಡಲಾಗಿದೆ.

ಕುಂಬ್ಳೆ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *