ಅಂಗಡಿಯ ಶೆಟರ್ ಮುರಿದು 90 ಸಾವಿರ ಮೌಲ್ಯದ ಸಿಗರೇಟ್ ಕದ್ದ!

Public TV
1 Min Read
GDG

ಗದಗ: ಅಂಗಡಿಗಳ ಶೆಟರ್ ಮುರಿದು ಕೇವಲ ಸಿಗರೆಟ್ ಪ್ಯಾಕ್‍ಗಳನ್ನ ಮಾತ್ರ ಕದ್ದಿರುವ ವಿಚಿತ್ರ ಘಟನೆ ಗದಗ ನಗರದಲ್ಲಿ ನಡೆದಿದೆ.

ನಗರ ಬಸವೇಶ್ವರ ವೃತ್ತದಲ್ಲಿ ಬಾಬುರಾಮ್ ಮತ್ತು ಉಮಾರಾಮ್ ಎಂಬವರಿಗೆ ಸೇರಿದ ಎರಡು ಕಿರಾಣಿ ಅಂಗಡಿಗಳಲ್ಲಿ ಶುಕ್ರವಾರ ತಡರಾತ್ರಿ ವೇಳೆ ಕಳ್ಳತನವಾಗಿವೆ. ಕಳ್ಳನೋರ್ವ ವಿಚಿತ್ರ ಹಾಗೂ ವಿನೂತನ ಕಳ್ಳತನಕ್ಕೆ ಮುಂದಾಗಿದ್ದು, ಅಂಗಡಿಗಳ ಶೆಟರ್ ಮುರಿದು ಒಳನುಗ್ಗಿದ್ದಾನೆ. ಹಣ, ಇತರೆ ಸಾಮಗ್ರಿ, ವಸ್ತುಗಳನ್ನ ಬಿಟ್ಟು ಕೇವಲ ಸಿಗರೆಟ್ ಪ್ಯಾಕ್‍ಗಳ ಟ್ಯೂಬ್‍ಗಳನ್ನ ಮಾತ್ರ ಕದ್ದು ಪರಾರಿಯಾಗಿದ್ದಾನೆ.

vlcsnap 2018 07 08 07h37m46s103

ಬಹುಷ ಸಿಗರೆಟ್ ದೊಡ್ಡ ಚಟಗಾರನಿರಬಹುದು ಎನ್ನಲಾಗುತ್ತಿದೆ. ಸಿಗರೆಟ್ ಪ್ಯಾಕ್‍ನ ಸುಮಾರು 20 ಟ್ಯೂಬ್‍ಗಳನ್ನ ಕಳ್ಳತನ ಮಾಡಲಾಗಿದ್ದು, ಅಂದಾಜು ಅವುಗಳ ಮೌಲ್ಯ 90 ಸಾವಿರ ಎನ್ನಲಾಗುತ್ತಿದೆ.

ಗದಗ ಶಹರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಿಗರೆಟ್ ಕಳ್ಳನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vlcsnap 2018 07 08 07h37m55s187

Share This Article
Leave a Comment

Leave a Reply

Your email address will not be published. Required fields are marked *