ಮಧ್ಯಮ ವರ್ಗದವರಲ್ಲಿಯೂ ಶ್ರೀಮಂತಿಕೆಯ ಅನುಭವಕ್ಕಾಗಿ ರಾಯಲ್ ವೆಡ್ಡಿಂಗ್ ಕಾರ್!

Public TV
1 Min Read
WEDDING CAR

ಭೋಪಾಲ್: ಸಾಮಾನ್ಯವಾಗಿ ಮದುವೆ ನಂತರ ಶ್ರೀಮಂತರು ರಾಯಲ್ ವೆಡ್ಡಿಂಗ್ ಕಾರಿನಲ್ಲಿ ದಿಬ್ಬಣ ಹೋಗುತ್ತಾರೆ. ಆದರೆ ಮಧ್ಯಮ ವರ್ಗದರು ಅಷ್ಟು ದುಬಾರಿ ಕಾರಿನಲ್ಲಿ ಹೋಗಲು ಸಾಧ್ಯವಿಲ್ಲ. ಆದರೆ ಮಧ್ಯಪ್ರದೇಶದಲ್ಲಿ ಮಧ್ಯಮ ವರ್ಗದವರಿಗೆ ರಾಯಲ್ ವೆಡ್ಡಿಂಗ್ ಕಾರನ್ನು ಸಿದ್ಧ ಮಾಡಿದ್ದಾರೆ.

ಮದುವೆ ಆಯೋಜಕರಾದ ಹಮೀದ್ ಖಾನ್ ಈ ರಾಯಲ್ ವೆಡ್ಡಿಂಗ್ ಕಾರನ್ನು ವಿನ್ಯಾಸ ಮಾಡಿದ್ದಾರೆ. ಖಾನ್ ತಮ್ಮ `ರೊಲ್ಸ್ ರಾಯ್ಸ್’ ಕಾರನ್ನು ವಿನೂತನವಾಗಿ ಬದಲಾಯಿಸಿ ಅದಕ್ಕೆ `ರಾಯಲ್ ವೆಡ್ಡಿಂಗ್ ಕಾರ್’ ಎಂದು ಹೆಸರು ಇಟ್ಟಿದ್ದಾರೆ. ಇದು ಕೇವಲ ಮಧ್ಯಮ ವರ್ಗದವರ ಮದುವೆ ವೇಳೆ ನವ ದಂಪತಿಯನ್ನು ದಿಬ್ಬಣಕ್ಕಾಗಿ ಕರೆದೊಯ್ಯಲು ಮಾತ್ರ ವಿನ್ಯಾಸಗೊಳಿಸಲಾಗಿದೆ.

ಮದುವೆಯ ಸಂದರ್ಭದಲ್ಲಿ ಮಧ್ಯಮ ವರ್ಗದವರು ಶ್ರೀಮಂತರಂತೆ ಅನುಭವ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಈ ಕಾರನ್ನು ನಿರ್ಮಿಸಲಾಗಿದೆ. ಆದರೆ ಈ ಕಾರು ಬಾಡಿಗೆಯ ದರವನ್ನು ಇನ್ನು ನಿರ್ಧಾರ ಮಾಡಿಲ್ಲ ಎಂದು ಖಾನ್ ತಿಳಿಸಿದ್ದಾರೆ.

ಖಾನ್ ಇದೇ ರೀತಿಯ ಕಾರನ್ನು ದುಬೈನಲ್ಲಿ ನೋಡಿದ್ದರು. ಆದ್ದರಿಂದ ಅದೇ ರೀತಿಯ ಕಾರನ್ನು ವಿನ್ಯಾಸ ಮಾಡಿದ್ದಾರೆ. ಈ ಚಾರಿಯೆಟ್ ಕಮ್ ಕಾರ್ ನಿರ್ಮಾಣ ಮಾಡಲು ಖಾನ್ ಸುಮಾರು 11 ತಿಂಗಳು ಸಮಯವನ್ನು ತೆಗೆದುಕೊಂಡಿದ್ದಾರೆ.

ಆರು ಚಕ್ರದ ಕಾರಿನಲ್ಲಿ ಹವಾನಿಯಂತ್ರಿತ ವ್ಯವಸ್ಥೆಯಿದೆ. ಜೊತೆಗೆ ಕಾರಿನಲ್ಲಿ ಎಲ್‍ಇಡಿ ಲೈಟಿಂಗ್ ಇದೆ. ಕಾರಿನ ಒಳಗೆ ಮರದಿಂದ ಅಲಂಕರಿಸಲಾಗಿದೆ. ಈ ರಾಯಲ್ ವೆಡ್ಡಿಂಗ್ ಕಾರ್ ನಿರ್ಮಾಣಕ್ಕೆ ಖಾನ್ ಸುಮಾರು 15 ಲಕ್ಷ ರೂ. ವೆಚ್ಚ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *