ಆಗಸಕ್ಕೆ ಚಿಮ್ಮಿದ ಕೆಲವೇ ಸೆಕೆಂಡ್‍ಗಳಲ್ಲಿ ಧರೆಗಪ್ಪಳಿಸಿ ಸ್ಫೋಟಗೊಂಡಿತು ರಾಕೆಟ್ – ವಿಡಿಯೋ ನೋಡಿ

Public TV
1 Min Read
japan rocket

ಟೋಕಿಯೋ: ಜಪಾನ್ ತೈಕಿಯಲ್ಲಿ ಶನಿವಾರ ಮೊಮೊ-2 ರಾಕೆಟ್ ಆಗಸಕ್ಕೆ ಚಿಮ್ಮಿದ ಕೆಲವೇ ಸೆಕೆಂಡುಗಳಲ್ಲಿ ನೆಲಕ್ಕೆ ಬಿದ್ದು ಸ್ಫೋಟಗೊಂಡಿದೆ.

ಮೊದಲ ಬಾರಿಗೆ ಜಪಾನ್ ಉದ್ಯಮಿಯೊಬ್ಬರು ಖಾಸಗಿಯಾಗಿ ನಿರ್ಮಿಸಿದ್ದ ರಾಕೆಟ್ ಹೊಕೈಡ್ ನಗರದ ಬಳಿ ಇರುವ ತೈಕಿ ದ್ವೀಪದಿಂದ ಉಡಾವಣೆಗೊಂಡಿತ್ತು. ತಜ್ಞರ ನಿಗಧಿತ ಗುರಿಯ ಪ್ರಕಾರ ಉಡಾವಣೆಯಾದ ರಾಕೆಟ್ ಆಗಸದಲ್ಲಿ 100 ಕಿಮೀ ಕ್ರಮಿಸಬೇಕಿತ್ತು. ಆದರೆ ಉಡಾವಣೆಯಾದ ಕೆಲ ಸೆಕೆಂಡಿನಲ್ಲೇ ರಾಕೆಟ್ ಪತನಗೊಂಡು ಸ್ಫೋಟಗೊಂಡಿದೆ.

https://twitter.com/nic_galindo/status/1012886360468975616

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಕೆಟ್ ಉಡಾವಣೆ ಮಾಡಿದ ಸಂಸ್ಥೆಯ ಮುಖ್ಯಸ್ಥರು ತಿಳಿಸಿರುವಂತೆ ರಾಕೆಟ್‍ನ ಎಂಜಿನ್ ಭಾಗದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಯೋಜನೆ ವಿಫಲ ಆಗಿದ್ದಕ್ಕೆ ಕ್ಷಮೆ ಕೋರಿದ್ದು, ನಮ್ಮ ತಂಡವು ಯೋಜನೆಯ ವಿಫಲವಾದ ಕುರಿತ ಕಾರಣಗಳನ್ನು ತಿಳಿದು ಸುಧಾರಿತ ರಾಕೆಟ್ ಸಿದ್ಧಪಡಿಸುವುದಾಗಿ ಹೇಳಿದ್ದಾರೆ.

ಸಣ್ಣ ಹಾಗೂ ಹಗುರ ರಾಕೆಟ್ ಸಿದ್ಧಪಡಿಸಲು ಉದ್ಯಮಿ ಲಿವೆಡೂರ್ ಹಾಗೂ ಹಲವು ಬಾಹ್ಯಾಕಾಶ ವೈಜ್ಞಾನಿಕ ತಜ್ಞರು ಸೇರಿ 2005ರಲ್ಲಿ ಯೋಜನೆ ಆರಂಭಿಸಿದ್ದರು.

ಅಮೆರಿಕದ ಎಲೋನ್ ಮಾಸ್ಕ್ ಸಿಇಒ ಆಗಿರುವ ಸ್ಪೇಸ್ ಎಕ್ಸ್ ಕಂಪೆನಿ ರಾಕೆಟ್ ಉಡಾವಣೆಗೆ ಕೈ ಹಾಕಿದ ಸಂದರ್ಭದಲ್ಲೂ ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ರಾಕೆಟ್ ಸ್ಫೋಟಗೊಂಡಿತ್ತು. ಹಲವು ಪ್ರಯತ್ನಗಳ ಬಳಿಕ ಸ್ಪೇಸ್ ಎಕ್ಸ್ ಕಂಪೆನಿ ರಾಕೆಟ್ ಉಡಾವಣೆಯಲ್ಲಿ ಯಶಸ್ಸು ಕಂಡಿತ್ತು.

https://www.youtube.com/watch?v=RvTxQq8Wbe0

Share This Article
Leave a Comment

Leave a Reply

Your email address will not be published. Required fields are marked *