ಐರ್ಲೆಂಡ್, ಇಂಗ್ಲೆಂಡ್ ತಂಡಕ್ಕೆ ನಾವು ಸರ್ಪ್ರೈಸ್ ನೀಡ್ತೀವಿ: ಕೊಹ್ಲಿ

Public TV
2 Min Read
kohli m1
New Delhi: Indian cricket captain Virat Kohli reacts during a press conference ahead of the team's departure for England and Ireland, in New Delhi on Friday, June 22, 2018. (PTI Photo/Manvender Vashist) (PTI6_22_2018_000105B)

ಡಬ್ಲಿನ್: ಐರ್ಲೆಂಡ್ ಹಾಗೂ ಇಂಗ್ಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಅರ್ಡರ್ ಎದುರಾಳಿಗಳಿಗೆ `ಸರ್ಪ್ರೈಸ್’ ಮಾಡುತ್ತೆ. ತಂಡದ ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್ ತಂಡದ ಸರ್ಪ್ರೈಸ್ ಆಟಗಾರರು ಎಂದು ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಅವರು, ಟೀಂ ಇಂಡಿಯಾ ಬ್ಯಾಟಿಂಗ್ ಅರ್ಡರ್ ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆ ಮಾಡಲು ಉತ್ತಮವಾಗಿದ್ದು, ಎದುರಾಳಿ ತಂಡಕ್ಕೆ ಸರ್ಪ್ರೈಸ್ ನೀಡಲು ಸಾಧ್ಯವಾಗಿದೆ. ಬ್ಯಾಟ್ಸ್ ಮನ್ ಸಹ ಬದಲಾವಣೆಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

kl rahul kohli

ಇದೇ ವೇಳೆ ಮೊದಲ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯದ ಕನ್ನಡಿಗ ಕೆಎಲ್ ರಾಹುಲ್ ಹಾಗೂ ದಿನೇಶ್ ಕಾರ್ತಿಕ್ ಮುಂದಿನ ಪಂದ್ಯದಲ್ಲಿ ಅವಕಾಶ ಪಡೆಯುವ ಕುರಿತು ಖಚಿತ ಪಡಿಸಿರುವ ಕೊಹ್ಲಿ, ಈ ಕುರಿತು ತಂಡದ ಇತರೇ ಆಟಗಾರರೊಂದಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಉಳಿದಂತೆ ಟೀಂ ಇಂಡಿಯಾ ಯುವ ಆಟಗಾರರಾದ ವಾಷಿಂಗ್ಟನ್ ಸುಂದರ್, ಸಿದ್ಧಾರ್ಥ್ ಕೌಲ್ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ವೇಗಿ ಉಮೇಶ್ ಯಾದವ್ ಸಹ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ 6ನೇ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿದು ಅಚ್ಚರಿ ಮೂಡಿಸಿದ್ದರು. ಇದಕ್ಕೂ ಮುನ್ನ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ (97), ಧವನ್ (74) ಮೊದಲ ವಿಕೆಟ್ ಗೆ 160 ರನ್ ಜೊತೆಯಾಟದ ನೆರವಿನಿಂದ ಉತ್ತಮ ಆರಂಭ ಪಡೆದಿತ್ತು. ಈ ಬಳಿಕ ರೈನಾ ಹಾಗೂ ಧೋನಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಉನ್ನತಿ ನೀಡಿ ಬಳಿಕ ಕೊಹ್ಲಿ 3 ಎಸೆತಗಳು ಬಾಕಿ ಇರುವಂತೆ ಬ್ಯಾಟಿಂಗ್ ನಡೆಸಿದ್ದರು. ಅಂತಿಮವಾಗಿ ಟೀಂ ಇಂಡಿಯಾ 208 ರನ್ ಹೊಡೆದಿತ್ತು.

ಟೀಂ ಇಂಡಿಯಾ ನೀಡಿದ ಗುರಿ ಬೆನ್ನತ್ತಿದ್ದ ಐರ್ಲೆಂಡ್ ತಂಡ ಕುಲ್‍ದೀಪ್ ಯಾದವ್ ಹಾಗೂ ಚಹಲ್ ದಾಳಿಗೆ ಸಿಲುಕಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಸೋಲುಂಡಿತು. ಸದ್ಯ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವ ಟೀಂ ಇಂಡಿಯಾ, ಮಲಹೈಡ್ ನಲ್ಲಿ ಜೂನ್ 29 ರಂದು ನಡೆಯುವ ಪಂದ್ಯದಲ್ಲಿ ಜಯದ ನಿರೀಕ್ಷೆಯಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *