ತನಗಿಂತ ಹೆಚ್ಚು ಸಂಭಾವನೆ ಪಡೆಯುವ ದೀಪಿಕಾ ಬಗ್ಗೆ ರಣ್‍ಬೀರ್ ಹೇಳಿದ್ದು ಹೀಗೆ

Public TV
1 Min Read
ranbir kapoor Deepika Padukone 2

ಮುಂಬೈ: ಬಾಲಿವುಡ್ ನಲ್ಲಿ ನನಗಿಂತ ಹೆಚ್ಚು ಸಂಭಾವನೆಯನ್ನು ನಟಿ ದೀಪಿಕಾ ಪಡುಕೋಣೆ ಪಡೆಯುತ್ತಾರೆ. ಅವರು ಸ್ಟಾರ್ ನಟಿಯಾಗಿದ್ದು ಹೆಚ್ಚು ಸಂಭಾವನೆ ಪಡೆಯಲು ಅರ್ಹರಾಗಿದ್ದಾರೆ ಎಂದು ನಟ ರಣಬೀರ್ ಕಪೂರ್ ಹೇಳಿದ್ದಾರೆ.

ಸದ್ಯ `ಸಂಜು’ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದ ರಣಬೀರ್ ಬಾಲಿವುಡ್ ನಲ್ಲಿ ಹಿರೋಯಿನ್ ಗಳಿಗೆ ಸಂಭಾವನೆ ತಾರತಮ್ಯ ಕುರಿತ ಪ್ರಶ್ನೆಗೆ ಉತ್ತರಿಸಿ, ಸಿನಿಮಾ ರಂಗದಲ್ಲಿ ಉಂಟಾಗುತ್ತಿರುವ ತಾರತಮ್ಯವನ್ನು ಒಪ್ಪಿಕೊಳ್ಳುತ್ತೇನೆ. ಅದರೆ ಕೆಲ ಬಿಗ್ ಸ್ಟಾರ್ ಗಳು ತಮಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂದು ದೀಪಿಕಾರನ್ನು ಉದಾಹರಣೆಯಾಗಿ ನೀಡಿದ್ದಾರೆ.

sanju new movie

ದೀಪಿಕಾ ಅವರು ಸ್ಟಾರ್ ನಟಿಯಾಗಿದ್ದು, ಅವರು ಹೆಚ್ಚಿನ ಸಂಭಾವನೆ ಪಡೆಯಲು ಅರ್ಹರಾಗಿದ್ದಾರೆ. ಅವರ ಬ್ರಾಂಡ್ ಮೌಲ್ಯವು ಹೆಚ್ಚಿದೆ. ಅವರೊಂದಿಗೆ ನಟಿಸಿದ್ದ ಸಿನಿಮಾದಲ್ಲಿ ತಮಗಿಂತ ಅವರಿಗೆ ಹೆಚ್ಚು ಸಂಭಾವನೆ ನೀಡಲಾಗಿತ್ತು. ಅವರು ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸದ್ಯ ಈ ಹೀರೋಯಿನ್ ಗಳಿಗೆ ಹೆಚ್ಚು ಸಂಭಾವನೆ ನೀಡುವ ಪ್ರವೃತ್ತಿ ಆರಂಭವಾಗಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.

ದೀಪಿಕಾ ಹಾಗೂ ರಣಬೀರ್ ತಮ್ಮ ಸಿನಿಮಾ ವೃತ್ತಿ ಜೀವನ್ನು ಒಟ್ಟಿಗೆ ಆರಂಭಿಸಿದ್ದು, ದೀಪಿಕಾ ನಟನೆಯ `ಓಂ ಶಾಂತಿ ಓಂ’ ಹಾಗೂ ರಣಬೀರ್ ನಟನೆಯ `ಸಾವರಿಯಾ’ ಸಿನಿಮಾಗಳು 2007ರಲ್ಲಿ ಬಿಡುಗಡೆಯಾಗಿದೆ. ಅಲ್ಲದೇ ಇದುವರೆಗಿನ ಇಬ್ಬರ ಸಿನಿಮಾ ಜರ್ನಿಯಲ್ಲಿ ಒಟ್ಟಿಗೆ 7 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಟಿಸಿದ್ದ `ಪದ್ಮಾವತ್’ ಸಿನಿಮಾ ಸಹ ಹಿಟ್ ಆಗಿತ್ತು.

ಬಾಲಿವುಡ್ ನಲ್ಲಿ  ಪ್ರಮುಖ ಪಾತ್ರದಲ್ಲಿ ನಟಿಸಿದ್ದ  ಸಿನಿಮಾ 200 ಕೋಟಿ ರೂ. ಗಳಿಸಿದ ಸಿನಿಮಾ ಕ್ಲಬ್ ಗೆ ಸೇರಿದ್ದು, ಚಿತ್ರರಂಗದಲ್ಲಿ ಎಲ್ಲರ ನೆಚ್ಚಿನ ನಟಿ ಎನಿಸಿಕೊಂಡಿದ್ದಾರೆ. ಅಲ್ಲದೇ ಬಾಲಿವುಡ್ ನಲ್ಲಿ ಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ದೀಪಿಕಾ ಹಾಗೂ ರಣಬೀರ್ ಜೋಡಿ `ತಮಾಷಾ’, `ಜವಾನಿ ಹೈ ದೀವಾನಿ’, `ಬಚನ್ ಎ ಹಸೀನೋ’ದಂತಹ ಪ್ರಮುಖ ಸಿನಿಮಾದಲ್ಲಿ ನಟಿಸಿದ್ದಾರೆ.

Ranbir Kapoor Deepika Padukone 3

Share This Article
Leave a Comment

Leave a Reply

Your email address will not be published. Required fields are marked *