ತಂದೆ ಹೇಳಿದಂತೆ ರೈತರ ಸಂಪೂರ್ಣ ಸಾಲಾಮನ್ನಾ ಆಗುತ್ತೆ – ನಿಖಿಲ್ ಕುಮಾರಸ್ವಾಮಿ

Public TV
1 Min Read
HDK NIKIL KUMARASWAMY

ಬೆಂಗಳೂರು: ನಮ್ಮ ತಂದೆಯವರು ಹಿಂದೆ ಹೇಳಿದಂತೆ ಇನ್ನು ಎಂಟು, ಹತ್ತು ದಿನಗಳ ಒಳಗೆ ರೈತರ ಸಂಪೂರ್ಣ ಸಾಲಾಮನ್ನ ಮಾಡ್ತಾರೆ ಎಂಬ ವಿಶ್ವಾಸವಿದೆ ಎಂದು ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಮಾತನಾಡಿದ ಅವರು, ನಮ್ಮ ತಂದೆಯವರು ಸಿಎಂ ಆಗಿದ್ದಾರೆ, ಆದರೆ ನಮ್ಮನ್ನು ರಾಜ್ಯದ ಜನತೆ ಸಂರ್ಪೂವಾಗಿ ಕೈ ಹಿಡಿಯದ ಕುರಿತು ನಮ್ಮ ಮನಸ್ಸಿನಲ್ಲಿ ನೋವಿದೆ. ಈಗಗಾಲೇ ಸರ್ಕಾರದ ಕುರಿತು ಹಲವರು ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ ಚುನಾವಣೆಯ ಪೂರ್ವ ನಮ್ಮ ತಂದೆಯವರು ರಾಜ್ಯದ ಜನತೆಗೆ ನೀಡಿದ್ದ ಸಾಲಮನ್ನಾ ಭರವಸೆಯನ್ನು ಈಡೇರಿಸುತ್ತಾರೆ. ಮುಂದಿನ ಐದು ವರ್ಷಗಳಲ್ಲಿ ಅವರ ಕನಸಿನ ಕರ್ನಾಟಕ ನಿರ್ಮಾಣ ಮಾಡಲು ಕಾರ್ಯನಿರ್ವಹಿಸುತ್ತಾರೆ. ರಾಜ್ಯದಲ್ಲಿ ಉತ್ತಮ ಸರ್ಕಾರವನ್ನು ನೀಡುತ್ತಾರೆ ಎಂದರು.

nikil kumaraswamy 1

ಈ ಹಿಂದೆ ನಮ್ಮ ತಂದೆಯವರು ಸಿಎಂ ಆಗಿದ್ದ ವೇಳೆ ನಾನು ಕಾಲೇಜು ಹುಡುಗ ಆಗಿದ್ದೆ, ಆದರೆ ಈಗ ಸಂಪೂರ್ಣ ಸನ್ನಿವೇಶ ಬದಲಾಗಿದೆ. ಆದರೆ ಸದ್ಯ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಹೆಚ್ಚಾಗಿದ್ದು, ಅದರೊಂದಿಗೆ ಒತ್ತಡವೂ ಹೆಚ್ಚಿದೆ. ಈ ಸ್ಥಾನದಲ್ಲಿ ಕುಳಿತಿರುವುದು ಖುಷಿ ಪಡುವಂಥದ್ದು ಏನೂ ಇಲ್ಲ. ಯಾಕೆಂದರೆ ಮನಸ್ಸಿನಲ್ಲಿ ನೋವಿದೆ ಪೂರ್ಣ ಪ್ರಮಾಣದಲ್ಲಿ ಜನರು ಕೈ ಹಿಡಿಯಲಿಲ್ಲ. ಬಹುಶಃ ಒಂದು ದೈವಶಕ್ತಿಯಿಂದ ನಮ್ಮ ತಂದೆಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂದರು.

ರಾಜಕೀಯದಲ್ಲಿದ್ದೇನೆ: ಹಲವು ಬಾರಿ ಮಾಧ್ಯಮಗಳಿಂದ ನನಗೆ ರಾಜಕೀಯ ಪ್ರವೇಶದ ಕುರಿತು ಪ್ರಶ್ನೆ ಎದುರಾಗುತ್ತಿದೆ. ನಾನು ಹುಟ್ಟುತ್ತ ರಾಜಕೀಯ ಕುಟುಂಬದಿಂದ ಬಂದವನು. ಅದ್ದರಿಂದ ರಾಜಕೀಯ ಪ್ರವೇಶ ಪ್ರತ್ಯೇಕವಾಗಿಲ್ಲ, ಈಗಾಗಲೇ ರಾಜಕೀಯದಲ್ಲಿದ್ದೇನೆ. ಸಿನಿಮಾ ಮಧ್ಯೆಯೇ ಹಲವು ಜಿಲ್ಲೆಗಳ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಕೆಲ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಸೋಲುಂಡಿದ್ದು, ಈ ಕುರಿತು ಸಹ ನಾನು ಮಾಹಿತಿ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡುತ್ತೇವೆ. ಪಕ್ಷದ ಸಂಘಟನೆಯೇ ನನ್ನ ಮುಖ್ಯ ಉದ್ದೇಶವಾಗಿದೆ ಎಂದರು.

HDK 4 1

Share This Article
Leave a Comment

Leave a Reply

Your email address will not be published. Required fields are marked *