ಬೆಂಗಳೂರು: ನಗರದ ಜನತೆಗೆ ಶಾಕಿಂಗ್ ನ್ಯೂಸ್ ಬಂದಿದೆ. ಇನ್ನೈದು ವರ್ಷದಲ್ಲಿ ಬೆಂಗಳೂರಿಗೆ ನೀರೆ ಸಿಗಲ್ಲ ಅಂತ ರಾಜ್ಯದ ಜಲತಜ್ಞರು ಬೆಚ್ಚಿಬೀಳಿಸೋ ರಿಪೋರ್ಟ್ ಒಂದನ್ನು ರೆಡಿ ಮಾಡಿದ್ದಾರೆ.
ವರದಿಯಲ್ಲಿ ಕಾವೇರಿ ನೀರಿನ ಅವಲಂಬನೆ ಕೇವಲ ಐದು ವರ್ಷದ ಅವಧಿಯಷ್ಟೇ ಅಂತ ಹೇಳಾಗಿದೆ. ತದ ನಂತ್ರ ಬೆಳೆಯುವ ಬೆಂಗಳೂರಿನ ದಾಹ ತೀರಿಸಲು ಕಾವೇರಿಗೂ ಅಸಾಧ್ಯವಾಗಲಿದೆ. ಹೀಗಾಗಿ ಬೆಂಗಳೂರಿಗೆ ಇನ್ನೈದು ವರ್ಷದಲ್ಲಿ ಹನಿ ಹನಿ ನೀರಿಗೂ ಹಾಹಾಕಾರ ಎದುರಾಗಲಿದೆ.
ಈಗಾಗಲೇ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಪಾತಾಳ ಕಂಡಿದೆ. ಈ ಮಧ್ಯೆ ಇನ್ನೆರಡು ವರ್ಷವಷ್ಟೇ ಅಂತರ್ಜಲದ ನೀರು ಉಪಯೋಗ ಅಂತಾ ನೀತಿ ಅಯೋಗ ಎಚ್ಚರಿಕೆ ನೀಡಿರುವುದು ನಿವಾಸಿಗಳನ್ನು ಬೆಚ್ಚಿಬೀಳಿಸುವಂತಿದೆ. ಬೆಂಗಳೂರಿಗೆ ಕುಡಿಯುವ ನೀರಿನ ಬರದ ವರದಿಯನ್ನು ಈ ವಾರದಲ್ಲಿಯೇ ಸಿಎಂಗೆ ಜಲತಜ್ಞ ಕ್ಯಾಪ್ಟನ್ ರಾಜಾ ರಾವ್ ಅವರು ಸಲ್ಲಿಕೆ ಮಾಡಲಿದ್ದಾರೆ. ಸರ್ಕಾರಕ್ಕೆ ಜಲತಜ್ಞರು ಸಲ್ಲಿಸಿರುವ ವರದಿಯ ಅಂಶ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ವರದಿಯಲ್ಲಿ ಇನ್ನೇನಿದೆ?:
ಬೆಳೆಯುವ ಬೆಂಗಳೂರಿಗೆ ಕಾವೇರಿ ನೀರು ದಾಹ ನೀಗಿಸಲ್ಲ, ಐದು ವರ್ಷದಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತೆ. ಅಂತರ್ಜಲ ಕುಸಿತವಾಗಿದ್ರಿಂದ ಬೋರ್‍ವೆಲ್ ನೀರು ಸಿಗೋದೆ ಇಲ್ಲ. ಸಿಕ್ರೂ ಅದು ತೀರಾ ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಲ್ಲ.
ಶರಾವತಿಯಿಂದ ನೀರು ತಂದು ಬೆಂಗಳೂರಿಗೆ ನೀಡುವ ಸರ್ಕಾರದ ಯೋಜನೆ ಯಶಸ್ವಿಯಾಗಲ್ಲ. ಇದನ್ನು ಕೈಬಿಡಿ. ಯಾಕೆಂದ್ರೆ ಶರಾವತಿಯಿಂದ ನೀರು ತರೋದ್ರಿಂದ ವಿದ್ಯುತ್ ಉತ್ಪಾದನೆ ಕುಂಠಿತವಾಗಲಿದೆ. ಪ್ರತಿ ವರ್ಷವೂ ಶರಾವತಿ ತುಂಬುವ ಗ್ಯಾರೆಂಟಿಯೂ ಇಲ್ಲ.
ಭೀಕರ ಬರದಿಂದ ಹೊರಬರಬೇಕಾದ್ರೇ ಕೊಳಚೆ ನೀರನ್ನು ಸಂಸ್ಕರಿಸಿ ಕುಡಿಯುದು ಒಂದೇ ಉಳಿದಿರುವ ಮಾರ್ಗ. ಈಗಿನಿಂದಲೇ ಇದನ್ನು ಮಾಡಬೇಕು. ಸಂಸ್ಕರಿಸಿದ ನೀರನ್ನು ಮೊದಲು ಸಿಎಂರಿಂದ ಹಿಡಿದು ಶಾಸಕರು, ಜನಪ್ರತಿನಿಧಿಗಳು ಕುಡಿದು ತೋರಿಸಬೇಕು. ಇದೊಂದೆ ಸದ್ಯ ಉಳಿದಿರುವ ಮಾರ್ಗವಾಗಿದೆ.