ದಾವಣಗೆರೆ: ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಯಾವುದೇ ಅಧಿಕಾರಕ್ಕಾಗಿ ನಾನು ಪ್ರಯತ್ನಿಸಿಲ್ಲ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾವು ಲಾಬಿ ನಡೆಸಿಲ್ಲ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಪಕ್ಷದಲ್ಲಿ ನಾನು ಯಾವತ್ತು ನನ್ನ ಮಗನ ಪರವಾಗಿ ನಿಂತಿಲ್ಲ. ಅಲ್ಲದೇ ಸಚಿವ ಸ್ಥಾನಕ್ಕಾಗಿ ತಲೆ ಕೆಡಿಸಿಕೊಂಡಿಲ್ಲ. ಈಗ ಕ್ಷೇತ್ರದ ಅಭಿವೃದ್ಧಿ ಮೇಲಷ್ಟೇ ನನ್ನ ಗಮನ ಎಂದು ತಿಳಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಶಿವಾನಂದ ಜಾಮದಾರ್ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ಜಾಮದಾರ ಅಧಿಕಾರದಲ್ಲಿದ್ದಾಗ ಯಾರಿಗೆ ತಾನೇ ಒಳ್ಳೆಯ ಕೆಲಸ ಮಾಡಿದ್ದಾರೆ. ಜೆ.ಎಚ್.ಪಟೇಲ್ ಅವರು ಪೂರ್ಣ ಅಧಿಕಾರ ನೀಡಿದ್ದಾಗ ರೈತರಿಗೆ ಏನು ಅನುಕೂಲ ಮಾಡಿಕೊಟ್ಟಿದ್ದಾರೆ. ಹಾಗೊಂದು ವೇಳೆ ಒಳ್ಳೆಯ ಕೆಲಸ ಮಾಡಿದ್ದರೆ ಒಂದೆರೆಡು ಉದಾಹರಣೆ ನೀಡಲಿ ಎಂದು ಟಾಂಗ್ ನೀಡಿದರು.