ಮುಂಬೈ: ಆಸ್ತಿಯ ಮುಂದೆ ಸಂಬಂಧಕ್ಕೂ ಬೆಲೆ ಇರಲ್ಲ ಎನ್ನುವ ಮಾತಿಗೆ ಪುಷ್ಟಿ ಎನ್ನುವಂತೆ ಮಹಾರಾಷ್ಟ್ರದ ವಾಸೀಂ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ಹೆತ್ತ ತಾಯಿಯನ್ನೇ ಟ್ರ್ಯಾಕ್ಟರ್ ಮುಂದೆ ಎಸೆದಿದ್ದಾನೆ.
ಗ್ರಾಮದ ಮತ್ತೊಬ್ಬ ವ್ಯಕ್ತಿಯೊಂದಿಗೆ ಇದ್ದ ಜಮೀನು ವ್ಯವಹಾರದಲ್ಲಿ ಭೂಮಿಯನ್ನು ಉಳಿಸಿಕೊಳ್ಳಲು ಹೆತ್ತ ಮಗನೇ ತಾಯಿಯನ್ನು ಟ್ರ್ಯಾಕ್ಟರ್ ಮುಂದೆ ಎಸೆದಿದ್ದಾನೆ. ಕೋರ್ಟ್ ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಈತ ಭೂಮಿಯನ್ನು ಕಳೆದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಕೇಸ್ ಗೆದ್ದಿದ್ದ ವ್ಯಕ್ತಿ ತನ್ನ ಭೂಮಿಯಲ್ಲಿ ಟ್ರ್ಯಾಕ್ಟರ್ ಬಳಸಿ ಉಳುಮೆಗೆ ಮುಂದಾಗಿದ್ದ. ಆದರೆ ಇದಕ್ಕೆ ಅಡ್ಡಪಡಿಸಿದ ವ್ಯಕ್ತಿ ತನ್ನ ತಾಯಿಯನ್ನೇ ಟ್ರ್ಯಾಕ್ಟರ್ ಅಡ್ಡಲಾಗಿ ಮಲಗಿಸಿದ್ದಾನೆ.
ಘಟನೆಯಲ್ಲಿ ವೃದ್ಧ ತಾಯಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಯಾವುದೇ ಕರುಣೆ ಇಲ್ಲದೇ ಹೆತ್ತ ತಾಯಿಯನ್ನು ಟ್ರ್ಯಾಕ್ಟರ್ ಕೆಳಗೆ ತಳ್ಳಿದ್ದ ಮಗನ ಕೃತ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿದೆ. ಹಲವರು ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿ ಮರುಟ್ವೀಟ್ ಮಾಡಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಬರೆದುಕೊಂಡಿದ್ದಾರೆ.
Poor old mother. The son must be awarded capital punishment.
— #DhruvilPurani (@DhruvilForChess) June 23, 2018
https://twitter.com/AkshayVandure1/status/1010407493418168320?
https://www.youtube.com/watch?v=rIFa07cLR6I