ಸಾರ್ವಜನಿಕ ಸ್ಥಳದಲ್ಲಿಯೇ ನ್ಯಾಯ ಕೇಳಿದ ಮಹಿಳೆಯ ಎದೆಗೆ ಒದ್ದ ಜನಪ್ರತಿನಿಧಿ!

Public TV
1 Min Read
MAN 1

ಹೈದರಾಬಾದ: ಪ್ರಜಾಪ್ರತಿನಿಧಿಯೋರ್ವ ಮಹಿಳೆಗೆ ಸಾರ್ವಜನಿಕ ಸ್ಥಳದಲ್ಲಿ ಒದ್ದ ಘಟನೆ ಹೈದರಾಬಾದ್ ನ ನಿಜಾಮ್ ಬಾದ್ ಜಿಲ್ಲೆಯಲ್ಲಿ ನಡೆದಿದೆ.

ರವಿವಾರ ಧರಪಳ್ಳಿ ಮಂಡಲದ(ಸ್ಥಳೀಯ ಸರಕಾರ)ಅಧ್ಯಕ್ಷ ಇಮ್ಮಡಿ ಗೋಪಿ ಮಹಿಳೆಯನ್ನು ಸಾರ್ವಜನಿಕ ಸ್ಥಳದಲ್ಲಿ ಎದೆಗೆ ಒದ್ದು ಅಪಮಾನ ಮಾಡಿದ್ದಾನೆ.

ಗೋಪಿಯಿಂದ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು 10 ತಿಂಗಳ ಹಿಂದೆ 33ಲಕ್ಷ ರೂ ಮೌಲ್ಯದ ಜಮೀನೊಂದನ್ನು ಖರೀದಿಸಿದ್ದರು. ಆದರೆ ಭೂಮಿಯನ್ನು ಮಹಿಳೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲು ಗೋಪಿ ವಿಳಂಬ ಮಾಡಿದ್ದಾನೆ. ಈ ಭಾಗದಲ್ಲಿ ಜಮೀನಿನ ಬೆಲೆ ಹೆಚ್ಚಾಗಿದ್ದು, ಹೆಚ್ಚುವರಿಯಾಗಿ 50ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರದಂದು ಮಹಿಳೆಯ ಕುಟುಂಬಸ್ಥರು ಗೋಪಿಯವರ ಮನೆಗೆ ಹೋಗಿ ತಮ್ಮ ಭೂಮಿಯನ್ನು ತಮಗೆ ಹಸ್ತಾಂತರಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಆಗ ಗೋಪಿಯೊಂದಿಗೆ ಮಾತಿನ ಚಕಮಕಿ ನಡೆದು ಮಹಿಳೆ ಗೋಪಿ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಇದರಿಂದ ಸಿಟ್ಟುಗೊಂಡ ಇಮ್ಮಡಿ, ಗೋಪಿ ಮಹಿಳೆಯನ್ನು ಸಾರ್ವಜನಿಕವಾಗಿ ಎದೆಗೆ ಒದ್ದು ಅವಮಾನ ಮಾಡಿದ್ದಾನೆಂದು ಮಹಿಳೆ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೊಂದ ಮಹಿಳೆ ಗೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಅದರನ್ವಯ ಭಾರತೀಯ ದಂಡ ಸಂಹಿತೆಯ ಪ್ರಕಾರ ಗೋಪಿ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆಲಂಗಾಣ ರಾಷ್ಟ್ರೀಯ ಸಮಿತಿಯ ಸ್ಥಳೀಯ ಸರಕಾರದ ಪ್ರತಿನಿಧಿ ಗೋಪಿ, ಮಹಿಳೆ ಹಾಗೂ ಆಕೆಯ ಕುಟುಂಬದವರ ವಿರುದ್ಧ ದೂರನ್ನು ದಾಖಲಿಸಿದ್ದು, ಮಹಿಳೆ ಹಾಗೂ ಅವರ ಕುಟುಂಬದವರಿಂದ ತನ್ನ ಆಸ್ತಿಗೆ ಧಕ್ಕೆಯುಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *