ತುಮಕೂರು: ಸಣ್ಣ ಕೈಗಾರಿಕಾ ಖಾತೆ ನನಗೆ ತೃಪ್ತಿ ತಂದಿದೆ. ಸೋಮವಾರ ಅಧಿಕಾರಗಳ ಸಭೆ ಕರೆದು ಇಲಾಖೆಗೆ ಬಗ್ಗೆ ತಿಳಿದುಕೊಳ್ಳುತ್ತೇನೆ ಅಂತ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ.
ಸಣ್ಣ ಕೈಗಾರಿಕಾ ಸಚಿವರಾಗಿ ಆಯ್ಕೆಯಾದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ವಿದ್ಯಾವಂತ ನಿರುದ್ಯೋಗಿ ಯುವಕರು ಸಣ್ಣ ಕೈಗಾರಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಯೋಚನೆ ಇದೆ. ಅತೃಪ್ತರ ಸಾಲಿಗೆ ಸೇರುವ ವ್ಯಕ್ತಿ ನಾನಲ್ಲ. ಸಿಎಂ ಕುಮಾರಸ್ವಾಮಿಗೆ ಹಿಂಸೆ ಕೊಡುವ ವ್ಯಕ್ತಿ ನಾನಲ್ಲ. ಕೊಟ್ಟಿರೋ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಅಂತ ತಿಳಿಸಿದ್ರು.
ಶೈಕ್ಷಣಿಕ ಅರ್ಹತೆ ಗಿಂತ ಅನುಭವದ ಆಧಾರದ ಮೇಲೆ ಸಚಿವರು ಖಾತೆ ನಿಭಾಯಿಸ್ತಾರೆ. ಆದರೂ ಸಚಿವ ಸ್ಥಾನಕ್ಕೆ ಶೈಕ್ಷಣಿಕ ಅರ್ಹತೆ ಮಾನದಂಡ ಮಾಡಬೇಕು. ಕೇಂದ್ರ ಸರ್ಕಾರ ಶೈಕ್ಷಣಿಕ ಅರ್ಹತೆ ನಿಗದಿ ಮಾಡಬೇಕು. ಎಲ್ಲಾ ರಂಗದಲ್ಲೂ ಶೈಕ್ಷಣಿಕ ಅರ್ಹತೆ ಪರಿಗಣಿಸುವಂತೆ ರಾಜಕೀಯದಲ್ಲೂ ಪರಿಗಣಿಸಬೇಕು. ಮೆರಿಟ್ ಇದ್ದವರಿಗೆ ಅವಕಾಶ ಸಿಕ್ಕರೆ ಸಮಾಜ ಬದಲಾವಣೆಗೆ ಸಹಕಾರಿ ಅಂದ್ರು.