ಯಾವ ಬಾಲ್ ಬಂದ್ರೂ ಬ್ಯಾಟ್ ಬೀಸುತ್ತೇನೆ- ಯು.ಟಿ ಖಾದರ್

Public TV
1 Min Read
ut khader

ಬೆಂಗಳೂರು: ಹೈಕಮಾಂಡ್ ಯಾವುದೇ ಖಾತೆ ಕೊಟ್ಟರೂ ಕೂಡ ಪ್ರಾಮಾಣಿಕತೆ ಮತ್ತು ಸಮರ್ಪಕವಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಹೀಗಾಗಿ ಯಾವುದೇ ಬಾಲ್ ಬಂದ್ರೂ ಬ್ಯಾಟ್ ಬೀಸುತ್ತೇನೆ ಅಂತ ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.

ಸಚಿವರ ಪಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಉದ್ದೇಶವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಮಾಡುತ್ತೇನೆ. ಸಚಿವ ಸ್ಥಾನ ಸಿಕ್ಕಿರೋದು ಖಚಿತವಾಗಿದೆ. ಆದ್ರೆ ಯಾವ ಖಾತೆ ಎಂಬುದರ ಬಗ್ಗೆ ತಿಳಿದುಬಂದಿಲ್ಲ. ಯಾವ ಖಾತೆ ನೀಡಿದ್ರೂ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಅಂದ್ರು.

vlcsnap 2018 06 06 12h22m31s26

ಖಾತೆ ಹಂಚಿಕೆ ಸಂಬಂಧಿಸಿದಂತೆ ಕಳೆದ ಒಂದು ವಾರದಿಂದ ಒಬ್ಬರಿಗೆ ಎಲ್ಲಾ ಖಾತೆಗಳು ಬಂದಾಯ್ತು. ಹೀಗಾಗಿ ಅದರ ಬಗ್ಗೆ ತಲೆಕೆಡಿಸೊಳ್ಳಲ್ಲ. ಒಟ್ಟಿನಲ್ಲಿ ಇಂದು ಖಾತೆ ಹಂಚಿಕೆ ಅಧಿಕೃತವಾಗಿ ಘೋಷಣೆಯಾದ ಬಳಿಕ ಅದರ ಮುಖಾಂತರ ಹೋಗುತ್ತೇವೆ. ಈ ಹಿಂದೆ ಹಲವು ಖಾತೆಗಳನ್ನು ನಿಭಾಯಿಸಿದ್ದೇನೆ. ಘೋಷಣೆ ಆಗುವರೆಗೂ ಯಾವ ಖಾತೆ ಅಂತ ಗೊತ್ತಾಗಲ್ಲ. ಕರಾವಳಿಯಲ್ಲಿ ಅಭಿವೃದ್ಧಿ ಮತ್ತು ನೆಮ್ಮದಿಯನ್ನು ಸ್ಥಾಪಿಸುವುದಕ್ಕೆ ಶ್ರಮಿಸುತ್ತೇನೆ ಅಂತ ಹೇಳಿದ್ರು.

ನಾಲ್ಕೈದು ಜಿಲ್ಲೆಗಳಿಗೆ ಒಬ್ಬರೇ ಬ್ಯಾಟ್ಸ್ ಮನ್ ಆಗಿದ್ದೀರಾ ಅಂತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ಜನಪ್ರತಿನಿಧಿಗಳು ಮಾತ್ರ ಇಲ್ಲದೇ ಇರಬಹುದು. ಪಕ್ಷದ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು ಹಾಗೂ ಜನಸಾಮಾನ್ಯರು ಇದ್ದಾರೆ. ಹೀಗಾಗಿ ಅವರು ಮತ್ತೆ ನಮ್ಮ ಪಕ್ಷವನ್ನು ಬಲಪಡಿಸುತ್ತಾರೆ ಅಂತ ಅವರು ವಿಶ್ವಾಸ ವ್ಯಕ್ತಪಡಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *