ಮೈತ್ರಿ ಸರ್ಕಾರ ರಚನೆಗೂ ಮುನ್ನವೇ ಕಾಂಗ್ರೆಸ್- ಜೆಡಿಎಸ್‍ನಲ್ಲಿ ಭಿನ್ನರಾಗ!

Public TV
1 Min Read
hdk dks congress jds

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಗೊಂದಲ ಮುಂದುವರಿದಿದ್ದು, ಖಾತೆ ಖ್ಯಾತೆ ಬೆನ್ನಲ್ಲೇ ಸಿಎಂ ಸ್ಥಾನ ಹಂಚಿಕೆ ಕುರಿತು ಗೊಂದಲ ಮುಂದುವರಿದಿದೆ. ಜೆಡಿಎಸ್ ನಾಯಕರು ಪೂರ್ಣಾವಧಿಯವರೆಗೂ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದರೆ ಕಾಂಗ್ರೆಸ್ ನವರು 30:30 ಸರ್ಕಾರದ ನಿಲುವನ್ನು ಮುಂದಿಟ್ಟಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಪೂರ್ಣಾವಧಿಗೆ ಎಚ್‍ಡಿಕೆ ಸಿಎಂ ಆಗುವ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹೇಳಿದ್ದಾರೆ. ಸೋಮವಾರ ಕಾಂಗ್ರೆಸ್ ಹೈಕಮಾಂಡ್ ಜೊತೆಗಿನ ಎಚ್‍ಡಿಕೆ ಮಾತುಕತೆಯಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಇನ್ನು ಚರ್ಚೆ ಆಗಬೇಕಿದೆ. ಉಪಮುಖ್ಯಮಂತ್ರಿ ಇತರೆ ಖಾತೆ ಹಂಚಿಕೆ ಬಗ್ಗೆ ರಾಜ್ಯ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ. ಸಿಎಂ ಸ್ಥಾನ ಹಂಚಿಕೆ ಅಥವಾ ಪೂರ್ಣಾವಧಿಗೆ ಹೆಚ್ಡಿಕೆ ಸಿಎಂ ಆಗುವ ಬಗ್ಗೆ ಇನ್ನು ಚರ್ಚೆ ನಡೆದಿಲ್ಲ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರದಲ್ಲಿ 30:30 ಮ್ಯಾಚ್ ಆಡುವ ಇಂಗಿತವನ್ನು ವೇಣುಗೋಪಾಲ್ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ನಾವು ಮೊದಲು ಕಾಂಗ್ರೆಸ್‍ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೀವಿ: ಹೆಚ್‍ಡಿಡಿ

Congress HYD Meeting 1

ಎರಡು ಪಕ್ಷದ ನಾಯಕರು ಅಧಿಕಾರ ಹಂಚಿಕೆ ಸೂತ್ರ ಮಾಡಿಕೊಂಡಿದ್ದು, ಟಿ-20 ರೀತಿ 30:30 ಅಧಿಕಾರ ಹಂಚಿಕೆ ಸಾಧ್ಯತೆ ಇಲ್ಲವೇ ಇಲ್ಲ. ಕುಮಾರಸ್ವಾಮಿಯವರು ಫುಲ್ ಟರ್ಮ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೇಲುಕೋಟೆಯ ಜೆಡಿಎಸ್ ಶಾಸಕ ಪುಟ್ಟರಾಜು ಈ ಹಿಂದೆ ತಿಳಿಸಿದ್ದರು. ಜೆಡಿಎಸ್‍ಗೆ ಕಾಂಗ್ರೆಸ್ ಯಾವುದೇ ಷರತ್ತು ವಿಧಿಸದೇ ಬೆಂಬಲ ನೀಡಿದೆ. ಇಲ್ಲಿ ಯಾವ ಊಹಾಪೋಹಗಳಿಗೂ ಆಸ್ಪದ ಇಲ್ಲ. ಸಚಿವ ಸ್ಥಾನ ಹಂಚಿಕೆ ವಿಚಾರ, ಈಗಾಗಲೇ ಚರ್ಚೆಯಾಗಿದೆ ಎಂದು ಅವರು ಹೇಳಿದ್ದರು.

ಮೈತ್ರಿಯಾದಾಗ ಆರಂಭದಲ್ಲಿ ಕಾಂಗ್ರೆಸ್ ಜೆಡಿಎಸ್‍ಗೆ ಬೇಷರತ್ ಬೆಂಬಲ ನೀಡುತ್ತೇವೆ ಎಂದು ತಿಳಿಸಿತ್ತು. ಆದರೆ ಈಗ ನಿಧಾನವಾಗಿ ಷರತ್ತುಗಳನ್ನು ವಿಧಿಸುತ್ತಿದೆಯಾ ಎನ್ನುವ ಪ್ರಶ್ನೆ ಎದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *