ಸಿಡಿ ಬಿಡುಗಡೆ ಮಾಡ್ತೀನಿ ಎಂದಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್

Public TV
1 Min Read
nikhil Kumaraswamy 1

ರಾಮನಗರ: ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ ಬಾಲಕೃಷ್ಣ ನನ್ನ ವಿರುದ್ಧ ಸಿಡಿ ಬಿಡುಗಡೆ ಮಾಡುತ್ತೀನಿ ಎಂದಿದ್ದು ಬಹುಶಃ `ಜಾಗ್ವಾರ್’ ಚಿತ್ರದ ಸಿಡಿ ಇರಬೇಕು ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಹೆಚ್ ಸಿ ಬಾಲಕೃಷ್ಣಗೆ ಟಾಂಗ್ ಕೊಟ್ಟಿದ್ದಾರೆ.

ಮಾಗಡಿಯಲ್ಲಿ ಮಾತನಾಡಿದ ನಿಖಿಲ್, ನಾನು ಸಿಡಿ ಬಿಡುಗಡೆ ಮಾಡಿಸಿಕೊಳ್ಳುವ ಕೆಲಸವೇನು ಮಾಡಿಲ್ಲ. ಇಂತಹ ದೊಡ್ಡ ಕುಟುಂಬದಲ್ಲಿ ಹುಟ್ಟಿದ್ದು, ಗೌರವಯುತವಾಗಿ ಬದುಕುತ್ತಿದ್ದೇನೆ. ಯಾವುದೇ ಸಿಡಿಗಾಗಿ ನಾನು ಹೆದರಲ್ಲ. ಯಾವುದೇ ಮಾಡಿದರೂ ಅದರಲ್ಲಿ ಸತ್ಯಾಂಶ ಇರಬೇಕು ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣಗೆ ಸವಾಲ್ ಎಸೆದ ನಟ ನಿಖಿಲ್ ಕುಮಾರಸ್ವಾಮಿ

NIKIL

ಶ್ಯಾನಭೋಗನಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿದ್ದ ಎಚ್.ಸಿ ಬಾಲಕೃಷ್ಣ ರವರು ನಿಖಿಲ್ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಿನಿಮಾ ನಟರು ಬಂದು ನಾವು ಬೆನ್ನಿಗೆ ಚೂರಿ ಹಾಕ್ತಾರೆ ಅಂತಾ ಹೇಳ್ತಾರೆ. ಅವರು ಬಂದು ಕೇವಲ ಪ್ರಚಾರ ಮಾಡಿಕೊಂಡು ಮತ ಕೇಳಿಕೊಂಡು ಹೋಗಬೇಕು. ಅದನ್ನ ಬಿಟ್ಟು ಅವರೇನಾದರೂ ಮಾತನಾಡಿದರೆ, ನಮ್ಮ ಬಳಿ ಬೇಜಾನ್ ಕ್ಯಾಸೆಟ್‍ಗಳಿವೆ ನಾನು ಹೊರಗೆ ತೆಗೆಯುತ್ತೇನೆ ಎಂದು ಹೇಳಿದ್ದರು.

ಆದ್ರೆ ಬಳಿಕ ಬಿಡದಿ ಹೋಬಳಿಯಲ್ಲಿ ಇಂದು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ವೇಳೆ ಮಾತನಾಡಿದ ಬಾಲಕೃಷ್ಣ, ಚುನಾವಣೆ ಮುಗಿಯುವರೆಗೂ ಸಹ ಸಿಡಿ ವಿಚಾರವಾಗಿ ನಾನು ಮಾತನಾಡಲ್ಲ. ಚುನಾವಣೆ ಮುಗಿದ ಬಳಿಕ ಅದರ ಬಗ್ಗೆ ಮಾತನಾಡುತ್ತೇನೆ. ಉತ್ತರ ಕೊಡ್ತೀನಿ. ಹೀಗಾಗಿ ಈಗ ಅದರ ಅವಶ್ಯಕತೆ ಇಲ್ಲ. ನಿಖಿಲ್ ಕುಮಾರಸ್ವಾಮಿ ಒಬ್ಬ ಫಿಲಂ ಆಕ್ಟರ್, ಫಿಲಂ ಆಕ್ಟರ್ ತರಹ ಡೈಲಾಗ್ ಹೊಡೆದುಕೊಂಡು ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *