ಕೃಷ್ಣನೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ `ನಮೋ’- ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸುಳಿವು ಕೊಟ್ರಾ ಪ್ರಧಾನಿ?

Public TV
2 Min Read
modi hd devegowda final

ಉಡುಪಿ: ಕೃಷ್ಣನೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯದಲ್ಲಿ ಅವರು ನಮ್ಮ ವಿರೋಧಿಯಾಗಿರಬಹುದು. ಆದರೆ ಸಾರ್ವಜನಿಕ ಜೀವನದಲ್ಲಿ ಅವರು ನಮ್ಮ ವಿರೋಧಿಯಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷರು ದೇವೇಗೌಡರನ್ನು ಟೀಕಿಸಿದ್ದು ಎಷ್ಟು ಸರಿ? ಇದು ರಾಜಕೀಯ ಸಂಸ್ಕಾರವೇ ಎಂದು ಪ್ರಶ್ನಿಸಿದ್ದಾರೆ.

ದೇವೇಗೌಡರು ವರಿಷ್ಠ ನಾಯಕರಲ್ಲಿ ಒಬ್ಬರು. ಅವರ ಬಗ್ಗೆ ಕೀಳಾಗಿ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ನಮಗೆ ರಾಜಕೀಯವಾಗಿ ಅವರೊಂದಿಗೆ ವಿರೋಧ ಇರಬಹುದು. ಆದರೆ ದೇವೇಗೌಡರು ಹೇಳಿದಾಗಲೆಲ್ಲಾ ನಾನು ಭೇಟಿ ಮಾಡಿದ್ದೇನೆ. ಮನೆಗೆ ಬಂದಾಗ ನಾನೇ ಮನೆಬಾಗಿಲಿಗೆ ಬಂದು ಸ್ವಾಗತಿಸಿದ್ದೇನೆ ಎಂದು ತಿಳಿಸಿದರು.

hdd 1

ಮೋದಿ ಹೇಳಿದ್ದು ಏನು?
ಸಾರ್ವಜನಿಕ ಜೀವನದಲ್ಲಿ ಗೌರವ ಎನ್ನುವುದು ಇರುತ್ತದೆ. ಪ್ರತಿ ವ್ಯಕ್ತಿಗೆ ಅಹಂ ಎನ್ನುವುದು ಇರುತ್ತದೆ. ಸಾಮಾಜಿಕ ಜೀವನದಲ್ಲಿ ಮಾನ, ಮರ್ಯಾದೆ ಎನ್ನುವುದು ಅಮೂಲ್ಯವಾಗಿದೆ. ನಮ್ಮ ದೇಶ ಕಂಡ ಪ್ರಧಾನಿಗಳಲ್ಲಿ ಒಬ್ಬರಾದ ಹಾಗೂ ಈ ಮಣ್ಣಿನ ಮಗ ದೇವೇಗೌಡ ಅವರು ಯಾವುದೇ ಸಂದರ್ಭದಲ್ಲಿಯೂ ದೆಹಲಿ ಬಂದರು ನಾನು ಅವರಿಗಾಗಿ ಸಮಯ ಮೀಸಲಿಟ್ಟಿದ್ದೇನೆ. ಅವರು ಒಂದು ವೇಳೆ ನಮ್ಮ ನಮಗೆ ಬಂದರೆ ಅವರ ಗಾಡಿಯ ಬಾಗಿಲು ತೆರೆದು ಸ್ವಾಗತಿಸುತ್ತೇನೆ. ಅವರು ಹೊರಟರೆ ಗಾಡಿಯವರೆಗೆ ಹೋಗಿ ಬಿಟ್ಟು ಬರುತ್ತೇನೆ.

ಇಂದು ರಾಜತಾಂತ್ರಿಕ ವಿಚಾರದಿಂದ ಹೊರತಾಗಿರುವುದು. ಆದರೆ, ಎಐಸಿಸಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರು ಹದಿನೈದು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ದೇವೇಗೌಡ ಅವರನ್ನು ಅವಮಾನ ಮಾಡಿದ್ದಾರೆ.ಈಗ ಬೆಳವಣಿಗೆಯ ಹಂತದಲ್ಲಿರುವ ನೀವು ಈ ರೀತಿಯಾಗಿ ಮಾತನಾಡಿದ್ದು ಸಂಸ್ಕಾರವೇ?   ಆದರೆ ದೇವೇಗೌಡರು ಅವರು ದೇಶದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ.

dc Cover p6kfkueg4tt5g777douv9rt5e5 20160910035606.Medi

ದೇವೇಗೌಡರಿಗೆ ಅವಮಾನ ಮಾಡಿರುವುದು ನಿಮ್ಮ  ಜೀವನದ ಪ್ರಾರಂಭದಲ್ಲಿ ಮಾಡಿರುವ ತಪ್ಪು. ಮುಂದಿನ ದಿನಗಳಲ್ಲಿ ನೀವು ಪರದಾಡುವಂತಾಗುತ್ತದೆ. ಇದಕ್ಕೆ ಕಾರಣ ಏನು ಎಂದು ಆಗ ನಿಮಗೆ ಅರ್ಥವಾಗಲಿದೆ.

ರಾಹುಲ್ ಗಾಂಧಿ ತಮ್ಮ ಪ್ರಚಾರ ಭಾಷಣದಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಕರೆದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ನರೇಂದ್ರ ಮೋದಿ ಉಡುಪಿಯಲ್ಲಿ ದೇವೇಗೌಡರನ್ನು ಹೊಗಳಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮೋದಿ ಈ ಹೊಗಳಿಕೆಯಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸುಳಿವು ಕೊಟ್ರಾ ಪ್ರಧಾನಿ? ಅತಂತ್ರ ಬಂದರೆ ದೇವೇಗೌಡರಿಗೆ ನಮೋ ಎನ್ನುತ್ತಾ ಬಿಜೆಪಿ? ಬೇಕಂತಲೇ ದೇವೇಗೌಡರನ್ನ ಹಾಡಿ ಹೊಗಳಿದ್ರಾ ಮೋದಿ? ದೇವಗೌಡರನ್ನು ಹೊಗಳಿದ ಹಿಂದಿನ ಲೆಕ್ಕಾಚಾರವೇನು? ಸಿಎಂ ಆರೋಪದಂತೆ ಬಿಜೆಪಿಯ ಬಿ ಟೀಂ ಆಗಿದಿಯಾ ಜೆಡಿಎಸ್? ಮೋದಿ ಹೊಗಳಿಕೆ ಗೌಡರಿಗೆ ಗೌರವವೋ? ಹೊಡೆತವೋ ಎನ್ನುವ ಪ್ರಶ್ನೆ ಈಗ ಎದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *