ಚುನಾವಣಾ ಪ್ರಚಾರದ ವೇಳೆ ಮಂಗಳಮುಖಿಯರ ಮೈ-ಕೈ, ಎದೆ ಮುಟ್ಟಿ ಮಜಾ ತಗೊಂಡ ಜನ!

Public TV
1 Min Read
CKB DANCE COLLAGE

ಚಿಕ್ಕಬಳ್ಳಾಪುರ: ಚುನಾವಣಾ ಪ್ರಚಾರದ ವೇಳೆ ಡ್ಯಾನ್ಸ್ ಮಾಡುತ್ತಿದ್ದ ಮಂಗಳಮುಖಿಯರ ಮೈ-ಕೈ ಮುಟ್ಟಿ ಕೆಲವರು ಆಶ್ಲೀಲವಾಗಿ ವರ್ತನೆ ತೋರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವರಲಕೊಂಡ ಗ್ರಾಮದಲ್ಲಿ ನಡೆದಿದೆ.

ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್ ಸುಬ್ಬಾರೆಡ್ಡಿ ಅವರ ಪ್ರಚಾರ ಕಾರ್ಯಕ್ರಮದಲ್ಲಿ ತೃತೀಯ ಲಿಂಗಿಗಳನ್ನು ಬಳಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲವನ್ನುಂಟು ಮಾಡಿದೆ.

CKB DANCE

ವರಲಕೊಂಡ ಗ್ರಾ.ಪಂ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಬ್ಬಾರೆಡ್ಡಿ ಅವರಿಂದ ಚುನಾವಣಾ ಪ್ರಚಾರ ಕೈಗೊಳ್ಳಲಾಗಿತ್ತು. ಆದರೆ ಸುಬ್ಬಾರೆಡ್ಡಿ ಚುನಾವಣಾ ಪ್ರಚಾರಕ್ಕೆ ಬರುವ ಮುನ್ನ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಸುಮಾರು 20 ಜನ ತೃತೀಯ ಲಿಂಗಿಗಳನ್ನ ಕರೆಯಿಸಿ, ಅವರಿಂದ ತಮಟೆ ಸದ್ದಿಗೆ ಡ್ಯಾನ್ಸ್ ಮಾಡಿಸಲಾಗಿದೆ.

CKB DANCE 2

ಈ ವೇಳೆ ಕೆಲ ಗ್ರಾಮಸ್ಥರು ಅವರ ಎದೆ ಭಾಗವನ್ನು ಮುಟ್ಟಿ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದಾರೆ. ಆದರೆ ಇದನ್ನು ಮಂಗಳಿಮುಖಿಯರು ವಿರೋಧಿಸುವ ಗೋಜಿಗೂ ಹೋಗಿಲ್ಲ. ಇಂತಹ ಅಶ್ಲೀಲ ನೃತ್ಯ, ಕೆಲವರ ಅಸಭ್ಯ ವರ್ತನೆಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಸಂಜೆ ವೇಳೆಯಲ್ಲಿ ನಡು ರಸ್ತೆಯಲ್ಲಿ ಆಮಿಷಗಳನ್ನು ನೀಡಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಬಗ್ಗೆ ಪ್ರಜ್ಞಾವಂತ ವ್ಯಕ್ತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

CKB DANCE 3

Share This Article
Leave a Comment

Leave a Reply

Your email address will not be published. Required fields are marked *