ಬೀಜಿಂಗ್: 10 ತಿಂಗಳ ಮಗುವೊಂದು ಚಲಿಸುವ ವ್ಯಾನ್ ನಿಂದ ಬಿಡುವಿಲ್ಲದೆ ವಾಹನಗಳೂ ಓಡಾಡುವ ರಸ್ತೆಯಲ್ಲಿ ಬಿದ್ದ ಆಘಾತಕಾರಿ ಘಟನೆ ಚೀನಾದಲ್ಲಿ ನಡೆದಿದೆ.
ಈ ಘಟನೆ ಚೀನಾದ ಜಿಯಾಂಗ್ಸು ನಗರದ ಚಾಂಗ್ಝೌ ನಗರದಲ್ಲಿ ನಡೆದಿದ್ದು, ಮಗು ವ್ಯಾನಿನಿಂದ ಬಿದ್ದರೂ ಪೋಷಕರು ಗಮನಿಸದೆ ಹೋಗಿದ್ದಾರೆ. ಬಿಳಿಯ ವ್ಯಾನ್ ಒಂದು ರಸ್ತೆಯಲ್ಲಿ ತಿರುವು ತೆಗೆದುಕೊಂಡಿದೆ. ಆಗ ವ್ಯಾನಿನ ಹಿಂಭಾಗದ ಸೀಟಿನಲ್ಲಿದ್ದ ಮಗು ರಸ್ತೆಗೆ ಬಿದ್ದಿದೆ. ಆದರೆ ಮಗು ವಾಹನದಿಂದ ಹೊರ ಬಿದ್ದರೂ ಪೋಷಕರು ಅದನ್ನು ಗಮನಿಸದೇ ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಸ್ತೆಯಲ್ಲಿ ಬಿದ್ದ ತಕ್ಷಣ ಅದೃಷ್ಟವಶಾತ್ ದಾರಿಯಲ್ಲಿ ಸಂಚರಿಸುತ್ತಿದ್ದ ಜನರು ನೋಡಿ ಮಗುವನ್ನು ಎತ್ತಿಕೊಂಡಿದ್ದಾರೆ. ಅಷ್ಟರಲ್ಲಿ ವಾಹನದಲ್ಲಿ ಮಗು ಇಲ್ಲದಿರುವುದನ್ನು ಪೋಷಕರು ಗಮನಿಸಿದ್ದು, ಹಿಂದಿರುಗಿ ಬಂದು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
https://www.youtube.com/watch?v=nGtzwflKNio