ಮಂಡ್ಯ: ಮೇಲುಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೇ ಇದ್ದಿದ್ದು ಕಾಂಗ್ರೆಸ್‍ಗೆ ಈಗ ಕಂಟಕವಾಗಿದೆ. ಅಷ್ಟೇ ಅಲ್ಲ ಈ ಮ್ಯಾಟರ್ ಈಗ ಕೋರ್ಟ್ ಮೆಟ್ಟಿಲು ಕೂಡ ಏರಲಿದೆ.
ಹೌದು. ಮೇಲುಕೋಟೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಆನಂದ್, ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ರು. ಜೊತೆಗೆ ಇಪ್ಪತ್ತೈದು ಸಾವಿರ ದುಡ್ಡು ಕೂಡ ಕಟ್ಟಿದ್ರು. ಆದ್ರೆ ಈಗ ಕಾಂಗ್ರೆಸ್ ಮೇಲುಕೋಟೆಯಲ್ಲಿ ದಿ. ಪುಟ್ಟಣ್ಣಯ್ಯನವರ ಮಗ ದರ್ಶನ್ ಪುಟ್ಟಣಯ್ಯನವರಿಗೆ ಬೆಂಬಲ ನೀಡೋದಾಗಿ ಘೋಷಿಸಿದ್ದು, ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಕ್ರಿಯೆಯಿಂದ ಹಿಂದೆ ಸರಿದಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆಗೆ ಇಂದು ಅಧಿಸೂಚನೆ – ಏಪ್ರಿಲ್ 24ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ
ಇದ್ರಿಂದ ಸಿಟ್ಟಿಗೆದ್ದ ಟಿಕೆಟ್ ಆಕಾಂಕ್ಷಿ ಆನಂದ್, ಸಿಎಂ ಇದಕ್ಕೆಲ್ಲ ಸೂತ್ರದಾರ, ಅಭ್ಯರ್ಥಿಯನ್ನು ಕಣಕ್ಕಿಳಿಸಲ್ಲ ಅಂದ ಮೇಲೆ ಅರ್ಜಿ ಸ್ವೀಕರಿಸಿದ್ಯಾಕೆ? ಇದು ಕಾನೂನು ಬಾಹಿರ, ನಾನು ಸಿಎಂ ವಿರುದ್ಧ ಕೋರ್ಟ್ ಮೆಟ್ಟಿಲೇರುತ್ತೇನೆ ಅಂತಾ ಹೇಳಿದ್ದಾರೆ. ಅಷ್ಟೇ ಅಲ್ಲ ಮೇಲುಕೋಟೆಯಲ್ಲಿ ಟಿಕೆಟ್ ಸಿಗದಿರುವ ಹಿನ್ನೆಲೆ ಚಾಮುಂಡೇಶ್ವರಿಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಅಂತಾ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕೊನೆಗೂ ರಿಲೀಸ್ ಆಯ್ತು ಕಾಂಗ್ರೆಸ್ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ -ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?