ಗೋಲ್ಡ್ ಕೋಸ್ಟ್ : ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2018 ರ ಕಾಮನ್ ವೆಲ್ತ್ ಗೆಮ್ಸ್ ನ ಬ್ಯಾಡ್ಮಿಂಟನ್ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ವಿಶ್ವ ಮೂರನೇ ಶ್ರೇಯಾಂಕಿತ ಆಟಗಾರ್ತಿ ಸೈನಾ ನೆಹ್ವಾಲ್, ಪಿವಿ ಸಿಂಧು ವಿರುದ್ಧ ಮೇಲುಗೈ ಸಾಧಿಸಿದ್ದಾರೆ.
ಭಾರತದ ಸ್ಟಾರ್ ಆಟಗಾರರಾದ ಸಿಂಧು ಹಾಗೂ ಸೈನಾ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ಸೈನಾ ಚಿನ್ನಕ್ಕೆ ಮುತ್ತಿಟ್ಟರು. ಈ ಮೂಲಕ ಭಾರತಕ್ಕೆ ಚಿನ್ನ ಪದಕ ತಂದುಕೊಟ್ಟರು. ಅಲ್ಲದೇ ವಯಕ್ತಿಕವಾಗಿ ಕಾಮನ್ ವೆಲ್ತ್ ಗೇಮ್ಸ್ ಬ್ಯಾಡ್ಮಿಂಟನ್ ನಲ್ಲಿ ಎರಡನೇ ಚಿನ್ನ ಗೆದ್ದ ದಾಖಲೆ ಮಾಡಿದರು.
ಸಿಂಧುರನ್ನು 21-18, 23-21 ನೇರ ಸೆಟ್‍ಗಳಲ್ಲಿ ಮಣಿಸಿವ ಮೂಲಕ ಸೈನಾ ಗೆಲುವು ಪಡೆದರು. ಅನುಭವದ ಬಲವನ್ನು ಉಪಯೋಗಿಸಿಕೊಂಡ ಸೈನಾ ಆರಂಭದಿಂದಲೂ ಪಂದ್ಯದಲ್ಲಿ ಸಿಂಧು ಎಲ್ಲಿಯೂ ಮುನ್ನಡೆ ಸಾಧಿಸುದಂತೆ ಆಕ್ರಮಣಕಾರಿಯಾಗಿ ಆಟವಾಡಿದರು. ಸೈನಾ ನೆಹ್ವಾಲ್ ಆಕ್ರಮಣಕಾರಿ ಆಟಕ್ಕೆ ತಿರುಗೇಟು ನೀಡಲು ಸಿಂಧು ಯತ್ನಿಸಿದರು ಗೆಲುವು ಸಾಧಿಸಲು ವಿಫಲವಾದರು.
ಸೈನಾ ಅವರ ಚಿನ್ನ, ಸಿಂಧು ಬೆಳ್ಳಿ ಪದಕದೊಂದಿಗೆ ಭಾರತ ಕ್ರೀಡಾಪಟುಗಳು ಈ ಗೇಮ್ಸ್ ನಲ್ಲಿ ಒಟ್ಟು 62 ಪದಕಗಳನ್ನು ಗೆದ್ದಿದ್ದು, ಪದಕಗಳ ಭೇಟೆಯನ್ನು ಮುಂದುವರೆಸಿದ್ದಾರೆ.