ಹೈದರಾಬಾದ್: ಟಾಲಿವುಡ್ ಫಿಲ್ಮ್ ಚೇಂಬರ್ ಮುಂದೇ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದ ನಟಿ ಶ್ರೀ ರೆಡ್ಡಿ, ಸದ್ಯ ಖ್ಯಾತ ನಿರ್ಮಾಪಕರ ಪುತ್ರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ಖ್ಯಾತ ತೆಲುಗು ನಿರ್ಮಾಪಕ ಸುರೇಶ್ ಬಾಬು ಅವರ ಪುತ್ರ ಹಾಗೂ ನಟ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸರ್ಕಾರದ ಫಿಲ್ಮ್ ಸ್ಟುಡಿಯೊವೊಂದರಲ್ಲಿ ಈ ಘಟನೆ ನಡೆದಿರುವುದಾಗಿ ಖಾಸಗಿ ಮಾಧ್ಯಮೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹಾಗೂ ಅಭಿರಾಮ್ ನಡುವಿನ ಫೋಟೋಗಳನ್ನು ಹಂಚಿಕೊಂಡಿರುವ ಅವರು ತಮ್ಮ ಆರೋಪಕ್ಕೆ ಸಾಕ್ಷಿಗಳನ್ನು ನೀಡಿದ್ದಾರೆ. ನಾನು ಹೇಳುತ್ತಿದ್ದ ವಿಷಯಗಳನ್ನು ಕೇವಲ ಸುಳ್ಳು ಎಂದು ಪ್ರತಿಪಾದಿಸುತ್ತಿದ್ದ ಹಲವರು ಈ ಫೋಟೋಗಳನ್ನು ಒಮ್ಮೆ ನೋಡಿ. ಅಭಿರಾಮ್ ನನ್ನ ಮುಖದ ಮೇಲೆ ಕೀಸ್ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ನಾನು ಈ ಫೋಟೋಗಳನ್ನು ರಿವಿಲ್ ಮಾಡುತ್ತಿರಲಿಲ್ಲ. ಆದರೆ ಆತನಿಗೆ ತನ್ನ ಕೃತ್ಯದ ಬಗ್ಗೆ ಸ್ವಲ್ಪವೂ ನಾಚಿಕೆ ಇಲ್ಲ. ಅದ್ದರಿಂದಲೇ ಇವುಗಳನ್ನು ಬಹಿರಂಗ ಪಡಿಸುತ್ತಿದ್ದೇನೆ. ಇದನ್ನು ನೋಡಿದ ಬಳಿಕವಾದರೂ ನನ್ನ ಹೋರಾಟಕ್ಕೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾರೆ.
https://twitter.com/srireddyleaks/status/983927302475034624
ನಟಿ ಶ್ರೀ ರೆಡ್ಡಿ ಈ ಫೋಟೋಗಳನ್ನು ಬಹಿರಂಗಗೊಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಹಲವು ಸಿನಿಮಾ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ತನ್ನ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಕೇಳಿದ್ದರು. ಅಂತಹ ಫೋಟೋ ಕಳುಹಿಸಿದ ಬಳಿಕವೂ ತನಗೆ ಸಿನಿಮಾದಲ್ಲಿ ಅವಕಾಶ ನೀಡಿರಲಿಲ್ಲ ಎಂದು ಶ್ರೀ ರೆಡ್ಡಿ ಆರೋಪಿಸಿದ್ದರು. ಆದರೆ ಆ ಸಂದರ್ಭದಲ್ಲಿ ಯಾರ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ.