ಬಿಡುಗಡೆಯಾದ 72 ಕ್ಷೇತ್ರಗಳ ಪೈಕಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತೆ: ಬಿಎಸ್‍ವೈ ಹೇಳ್ತಾರೆ ಓದಿ

Public TV
2 Min Read
bjp mysuru 2 3
BJP state president BS Yeddyurappa, Union Minister Ananth Kumar, party leader KS Eshwarappa and others during 2-days BJP State Executive Committee Meeting in Mysuru on Saturday. -KPN ### Mysuru BJP ECM

ಬೆಂಗಳೂರು: ಮೊದಲನೇ ಪಟ್ಟಿಯಲ್ಲಿ ಘೋಷಣೆಯಾಗಿರುವ 72 ಕ್ಷೇತ್ರಗಳ ಪೈಕಿ ಚುನಾವಣೆಯಲ್ಲಿ 65ಕ್ಕೂ ಹೆಚ್ಚು ಕ್ಷೇತ್ರಗಳನ್ನ ಗೆದ್ದೆ ಗೆಲ್ಲುತ್ತೇವೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಬಿಜೆಪಿ ಚುನಾವಣೆ ನಿರ್ವಹಣಾ ಕಾರ್ಯಗಾರವನ್ನು ಆಯೋಜನೆ ಮಾಡಿತ್ತು. ಈ ವೇಳೆ ಮಾತನಾಡಿದ ಅವರು, ಇನ್ನೆರೆಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಯಾಗಲಿದ್ದು 80ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುವುದು. ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಒಬ್ಬರನ್ನು ಬಿಟ್ಟರೆ ಬೇರೆ ಯಾರು ನಾಯಕರಿಲ್ಲ. ಅದರೆ ಬಿಜೆಪಿಯಲ್ಲಿ ಸಾಲು ಸಾಲು ನಾಯಕರಿದ್ದಾರೆ. ಈ ಬಾರಿ ಬಿಜೆಪಿಯಲ್ಲಿ ಕಾರ್ಯಕರ್ತರು ಹೆಚ್ಚಿನ ಶ್ರಮವನ್ನು ವಹಿಸಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಶೋಭಾ ಕರಂದ್ಲಾಜೆ ಮಾತನಾಡಿ, ಬಿಎಸ್‍ವೈ ನಮ್ಮ ಮುಖ್ಯ ಮಂತ್ರಿಯಾಗುತ್ತಿರುವುದು ನಮ್ಮೆಲ್ಲರ ಅದೃಷ್ಟ. ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್‍ವೈ ಎಂದು ಮೊದಲೇ ಘೋಷಿಸಿದೆ. ಈ ಬಾರಿ ಚುನಾವಣೆಯಲ್ಲಿ ನಾನು ಸ್ಪರ್ಧೆಯನ್ನು ಮಾಡುತ್ತಿಲ್ಲ ಹಾಗಾಗಿ ನಮಗೆಲ್ಲಾ ಚುನಾವಣೆ ನಿರ್ವಹಣಾ ಸಮಿತಿ ಜವಬ್ದಾರಿ ನೀಡಿದ್ದಾರೆ ಎಂದು ತಿಳಿಸಿದರು.

ಮಳೆಗಾಲದಲ್ಲಿ ಅಣಬೆ ಹುಟ್ಟುವಂತೆ ಚುನಾವಣಾ ಸಂದರ್ಭದಲ್ಲಿ ಹಲವಾರು ಪಕ್ಷಗಳು ಹುಟ್ಟುತ್ತವೆ. ಚುನಾವಣೆ ಮುಗಿಯುತ್ತಲೇ ಮಕಾಡೆ ಮಲಗುತ್ತವೆ. ಆದರೆ ಬಿಜೆಪಿ ಪಕ್ಷ ಹಾಗಲ್ಲ ಯಾವಾಗಲೂ ಸಹ ಬಂಡೆಯಂತೆ ಸದೃಢವಾಗಿ ನಿಂತಿರುತ್ತದೆ ಎಂದು ಹೇಳಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ಕಾಂಗ್ರೆಸ್‍ನಲ್ಲಿ ಪ್ರಜಾತಂತ್ರ ಇಲ್ಲ. ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ ಹೀಗೆ ಕಾಂಗ್ರೆಸ್‍ನಲ್ಲಿ ಅಜೀವ ಅಧ್ಯಕ್ಷರಿದ್ದಾರೆ ಎಂದು ಲೇವಡಿ ಮಾಡಿದರು.

ಪ್ರಧಾನಿಯವರು ಎಲ್ಲ ಬಿಜೆಪಿ ಸಂಸದರ ಜೊತೆ ದೂರವಾಣಿಯಲ್ಲಿ ಮಾತನಾಡಿ, ಕಾಂಗ್ರೆಸ್‍ನಲ್ಲಿ ಪ್ರಜಾತಂತ್ರ ಇಲ್ಲ. ಅಲ್ಲಿ ಇರುವವರೆಲ್ಲಾ ಅಜೀವ ಅಧ್ಯಕ್ಷರು. ಕಾಂಗ್ರೆಸ್ ಪಕ್ಷದಿಂದ ಪ್ರಜಾತಂತ್ರವನ್ನು ಉಳಿಸಲು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲು ಸೂಚಿಸಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಅಸಹಿಷ್ಣುತೆ ರಾಜಕಾರಣವನ್ನು ಮಾಡುತ್ತಿದೆ. ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಮಾಡುತ್ತಿದೆ. ಈ ಬಾರಿ ಅದು ದಕ್ಷಿಣದ ದೊಡ್ಡ ರಾಜ್ಯವಾದ ಕರ್ನಾಟಕವನ್ನು ಸೇರಿಸಿ 22 ರಾಜ್ಯ ಮಾಡುತ್ತೇವೆ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಹೇಳಿದರು.\

 

bjp list 1

bjp list 2

bjp list 3bjp list 3

Share This Article
Leave a Comment

Leave a Reply

Your email address will not be published. Required fields are marked *