ಬೆಂಗಳೂರಿನ 14 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಫೈನಲ್

Public TV
2 Min Read
bjp bsy

ಬೆಂಗಳೂರು: ನಗರದ 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಫೈನಲ್ ಮಾಡಿದೆ. ಟಿಕೆಟ್ ವಿಷಯವಾಗಿ ಬಿಜೆಪಿ ಇವತ್ತು ಮ್ಯಾರಥಾನ್ ಸಭೆ ನಡೆಸಿತು. ಬೆಂಗಳೂರಿನ ಯಲಹಂಕದ ರೆಸಾರ್ಟ್‍ವೊಂದರಲ್ಲಿ ಬೀಡು ಬಿಟ್ಟಿರುವ ನಾಯಕರುಗಳು 3 ದಿನಗಳ ಕಾಲ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಇವತ್ತು ಬೆಳಗ್ಗೆ ಬೆಂಗಳೂರು, ಬೀದರ್, ಕಲಬುರಗಿ, ಯಾದಗಿರಿ, ಮಧ್ಯಾಹ್ನ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಸಂಜೆ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ನಾಯಕರ ಅಭಿಪ್ರಾಯವನ್ನ ಸಂಗ್ರಹಿಸಿದ್ದಾರೆ.

vlcsnap 2018 04 04 20h48m33s243

ಟಿಕೆಟ್‍ಗಾಗಿ ಅಭ್ಯರ್ಥಿಗಳ ಪರ ಬೆಂಬಲಿಗರು ಭರ್ಜರಿ ಲಾಬಿ ನಡೆಸುತ್ತಿದ್ದಾರೆ. ಈ ವೇಳೆ, ಜನಾರ್ದನ ರೆಡ್ಡಿ ಬಗ್ಗೆ ಅಮಿತ್ ಶಾ ಹೇಳಿಕೆಯನ್ನ ಬಳ್ಳಾರಿಯ ಶ್ರೀರಾಮುಲು, ಸೋಮಶೇಖರ ರೆಡ್ಡಿ, ಜೆ.ಶಾಂತಾ ಪ್ರಸ್ತಾಪಿಸಿದಾಗ, ನಾಯಕರ ಆಜ್ಞೆಯನ್ನ ಪಾಲಿಸುತ್ತಿದ್ದೇವೆ. ಕಳಂಕಿತರಿಗೆ ಟಿಕೆಟ್ ಕೊಡಲ್ಲ ಅಂತ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಬಳ್ಳಾರಿ ಗ್ರಾಮೀಣದಿಂದ ರಾಮುಲು, ಬಳ್ಳಾರಿ ನಗರದಲ್ಲಿ ಸೋಮಶೇಖರ ರೆಡ್ಡಿ, ಕಂಪ್ಲಿಯಿಂದ ಸುರೇಶ್ ಬಾಬು ಹೆಸರನ್ನ ಜನಾರ್ದನ ರೆಡ್ಡಿ ಪ್ರಸ್ತಾಪ ಇಟ್ಟಿದ್ದಾರೆ. ಇನ್ನು ರೆಡ್ಡಿ ಪಕ್ಷ ಬಿಡಲ್ಲ ಅಂತ ರಾಮುಲು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

vlcsnap 2018 04 04 20h48m03s197

ನಾಳೆ ಕರಾವಳಿ, ಹಳೇಮೈಸೂರು ಭಾಗದ ಅಭ್ಯರ್ಥಿಗಳ ಚರ್ಚೆ ನಡೆಯಲಿದೆ. ಇತ್ತ ಸೋಮಣ್ಣ ಬೆಂಬಲಿಗರು ಸಹ ಬಿಜೆಪಿ ಕಚೇರಿಯಲ್ಲಿ ಬಿಎಸ್‍ವೈ ಕಾರಿಗೆ ಮುತ್ತಿಗೆ ಹಾಕಿದರು. ಏಪ್ರಿಲ್ 8 ಮತ್ತು 9ರಂದು ಅಮಿತ್ ಶಾ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದುಬಂದಿದೆ.

* ಮಲ್ಲೇಶ್ವರಂ – ಅಶ್ವಥ್ ನಾರಾಯಣ, ಶಾಸಕ
* ರಾಜಾಜಿನಗರ – ಸುರೇಶ್ ಕುಮಾರ್, ಶಾಸಕ
* ಪದ್ಮನಾಭನಗರ – ಆರ್.ಅಶೋಕ್, ಶಾಸಕ
* ಜಯನಗರ – ವಿಜಯ್ ಕುಮಾರ್, ಶಾಸಕ
* ಬಸವನಗುಡಿ – ರವಿ ಸುಬ್ರಹ್ಮಣ್ಯ, ಶಾಸಕ
* ಬೆಂ. ದಕ್ಷಿಣ – ಎಂ.ಕೃಷ್ಣಪ್ಪ, ಶಾಸಕ
* ಯಲಹಂಕ – ವಿಶ್ವನಾಥ್, ಶಾಸಕ
* ದಾಸರಹಳ್ಳಿ – ಮುನಿರಾಜು, ಶಾಸಕ
* ಮಹದೇವಪುರ – ಅರವಿಂದ ಲಿಂಬಾವಳಿ, ಶಾಸಕ
* ಸಿ.ವಿ.ರಾಮನ್ ನಗರ – ಸಿ.ರಘು, ಶಾಸಕ
* ಬೊಮ್ಮನಹಳ್ಳಿ – ಸತೀಶ್ ರೆಡ್ಡಿ, ಶಾಸಕ
* ಹೆಬ್ಬಾಳ – ವೈ.ಎ ನಾರಾಯಣಸ್ವಾಮಿ, ಶಾಸಕ
* ಕೆ.ಆರ್.ಪುರ – ನಂದೀಶ್ ರೆಡ್ಡಿ, ಮಾಜಿ ಶಾಸಕ
* ಯಶವಂತಪುರ – ಶೋಭಾಕರಂದ್ಲಾಜೆ / ರುದ್ರೇಶ್

bjp

 

 

Share This Article
Leave a Comment

Leave a Reply

Your email address will not be published. Required fields are marked *