ಸಾರ್ವಜನಿಕ ಸ್ಥಳದಲ್ಲೇ ಕಿಸ್ ಮಾಡಿ, ಮೈಮೇಲೆ ಕೈ ಹಾಕ್ತಾ, ತಳ್ಳಾಡಿದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು!

Public TV
1 Min Read
MNG STUDENT ROMANCE COLLAGE 1

ಮಂಗಳೂರು: ಹದಿಹರೆಯದ ಯುವಕ-ಯುವತಿಯರಿಗೆ ಭಯಮುಕ್ತ ವಾತಾವರಣ ಸಿಕ್ಕರೆ ಸಾಕು, ತಾವು ನಿಂತ ಜಾಗದಲ್ಲೇ ಮೈಮರೆಯುತ್ತಾರೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿಯಾಗುತ್ತದೆ.

ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೇಟೆಯ ಹೃದಯಭಾಗದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಾರ್ವಜನಿಕ ಜಾಗದಲ್ಲಿ ಕಿಸ್ ಮಾಡುತ್ತಾ, ಮೈ ಮೇಲೆ ಕೈಹಾಕುತ್ತಾ, ತಳ್ಳಾಡುತ್ತಾ ಅಸಭ್ಯ ವರ್ತನೆ ತೋರಿದ್ದಾರೆ. ಇವರ ಈ ವರ್ತನೆಯನ್ನು ನೋಡಿದ್ರೆ ಇವರಿಗೆ ಹೆತ್ತವರ ಬಗ್ಗೆ ಭಯವೇ ಇಲ್ಲವೇನೋ ಅನಿಸುತ್ತದೆ. ಈ ದೃಶ್ಯ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

ಬೆಳ್ತಂಗಡಿಯ ಶ್ರೀ ವಿಶ್ವೇಶ್ವರಯ್ಯ ಟ್ರೈನಿಂಗ್ ಕಾಲೇಜು ಮತ್ತು ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳಾಗಿರೋ ಇವರು, ಕಾಲೇಜು ಹಿಂಭಾಗದ ಖಾಲಿ ಪ್ರದೇಶದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಕಾಲೇಜು ಪ್ರಿನ್ಸಿಪಾಲರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲವಂತೆ.

ಪ್ರೇಮದ ಹೆಸರಲ್ಲಿ ಹದಿಹರೆಯದ ಹುಡುಗ- ಹುಡುಗಿಯರು ದಾಹ ತೀರಿಸಿಕೊಳ್ಳುತ್ತಿರುವ ಬಗ್ಗೆ ಮಾತ್ರ ಜನಸಾಮಾನ್ಯರು ಹೇಸಿಗೆ ಪಡುವಂತಾಗಿದೆ. ಆಗಿಂದಾಗಲೇ ಈ ಜಾಗಕ್ಕೆ ಬರುವ ವಿದ್ಯಾರ್ಥಿಗಳು ಅಲ್ಲಿ ಸುಮ್ಮನೆ ಕಾಲ ಕಳೆಯುತ್ತಾರೆ. ಬಳಿಕ ಒಬ್ಬರನ್ನೊಬ್ಬರು ಅಪ್ಪಿಕೊಂಡು, ಎತ್ತಿಕೊಂಡು ಮುದ್ದಾಡುವುದು ವಿಡಿಯೋದಲ್ಲಿ ಕಾಣಬಹುದು.

ಸದ್ಯ ಈ ವಿದ್ಯಾರ್ಥಿಗಳ ಈ ಅಶ್ಲೀಲ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಕಾಲೇಜು ಓದುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *