ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4 ಬಿಲ್ಡಿಂಗ್ ಕಟ್ಟಿ ನಾನೇ ಮಹಾರಾಜ ಅಂದ್ಕೊತಾರೆ. ಸಿಎಂ ಅವರಿಗೆ ನಾವು ಉತ್ತರ ಕೊಡಬೇಕಿಲ್ಲ, ಜನರೇ ಉತ್ತರ ಕೊಡ್ತಾರೆ ಅಂತ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುವ ಮೋರ್ಚಾದಿಂದ ಯಾರಿಗೂ ಟಿಕೆಟ್ ಬೇಡಿಕೆ ಇಟ್ಟಿಲ್ಲ. ಯಾರೋ ಒಬ್ಬ ನಾಯಕನ ಮಗ ಅನ್ನುವ ಕಾರಣಕ್ಕಾಗಿ ನಮ್ಮಲ್ಲಿ ಟಿಕೆಟ್ ನೀಡುವುದಿಲ್ಲ. ನಮ್ಮ ನಾಯಕರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಹುಣಸೂರಿನಲ್ಲಿ ಹನುಮ ಜಯಂತಿ ಆದಾಗ ನಾನು ಅಲ್ಲಿನ ಅಭ್ಯರ್ಥಿಯಾಗೋದಕ್ಕೋಸ್ಕರ ಹೊಡೆದಾಡುತ್ತಿದ್ದೇನೆ ಅಂತ ಕೆಲವರು ಹೇಳಿದ್ದರು. ಪ್ರಧಾನಿ ಮೋದಿ ಮೈಸೂರಿಗೆ ಬಂದಾಗ ನನ್ನ ಕೆಲಸದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದ್ರೆ ಎರಡು ದಿನಗಳ ಬಳಿಕ ಪತ್ರಿಕೆಗಳಲ್ಲಿ ಪ್ರಮೋದಾದೇವಿ ಅವರಿಗೆ ಟಿಕೆಟ್ ಸಿಗುತ್ತಾ? ಅಂತ ವರದಿಯಾಗಿತ್ತು. ಅದರೆ ಅಲ್ಲೊಬ್ಬ ಹಾಲಿ ಎಂಪಿ ಇದ್ದಾನೆ, ಸಾಕಷ್ಟು ಕೆಲಸ ಮಾಡಿದ್ದಾನೆ ಅಂತ ಯೋಚನೆ ಮಾಡಲಿಲ್ಲ. ಕೆಲವರು ಮನಸ್ಸಿನಲ್ಲಿ ಇರುವ ಕಸವನ್ನು ಈ ರೀತಿ ಬರೆಯುತ್ತಾರೆ. ಅದಕ್ಕೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಅಂತ ಪ್ರತಾಪ್ ಸಿಂಹ ನುಡಿದ್ರು. ಇದನ್ನೂ ಓದಿ: ಪ್ರತಾಪ್ ಸಿಂಹ ಕಾರ್ಯ ವೈಖರಿಗೆ ಶಹಬ್ಬಾಸ್ ಎಂದ ಪ್ರಧಾನಿ ಮೋದಿ
ಪ್ರಚೋದನಾಕಾರಿ ಭಾಷಣ ಮಾಡುವಂತಿಲ್ಲ ಎಂಬ ಚುನಾವಣಾ ಆಯುಕ್ತರ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸತ್ಯ ಕೆಲವರಿಗೆ ಅಪಥ್ಯವಾಗಿರುತ್ತದೆ, ಆಗ ಅದು ಪ್ರಚೋದನಾಕಾರಿಯಾಗಿ ಗೋಚರಿಸುತ್ತದೆ. ನನ್ನ ಪ್ರಕಾರ ಅನಂತ್ ಕುಮಾರ್ ಹೆಗ್ಡೆ ಸತ್ಯವನ್ನೇ ಮಾತಾಡುತ್ತಾರೆ. ಸತ್ಯವನ್ನು ಹೇಳಿದಾಗ ಅದು ಪ್ರಚೋದನಾಕಾರಿ ರೀತಿ ಅನ್ನಿಸುತ್ತದೆ ಅಂತ ಟಾಂಗ್ ನೀಡಿದ್ರು.
ದೇಶವನ್ನು ಹಿಂದುತ್ವ ಮತ್ತು ರಾಷ್ಟ್ರೀಯತೆಯಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ವಿವಿಧತೆಯಲ್ಲಿ ಏಕತೆ ಅಂತ ಹಿಂದೂ ಧರ್ಮ ಮಾತ್ರ ಹೇಳುತ್ತದೆ. ಬೇರೆ ಧರ್ಮದಲ್ಲಿ ಬೇರೆ ದೇವರನ್ನು ಒಪ್ಪಿಕೊಳ್ಳುವುದೇ ಇಲ್ಲ. ನಾವು ರಾಷ್ಟ್ರೀಯತೆಯನ್ನು ಪ್ರತಿಪಾದಿಸುವವರು ಅಂತ ಅವರು ಹೇಳಿದ್ರು. ಇದನ್ನೂ ಓದಿ: ತವರಿನಲ್ಲಿಯೇ ಸಿಎಂ ಸಿದ್ದರಾಮಯ್ಯರನ್ನ ಸೋಲಿಸಲು ಬಿಜೆಪಿ ಹೈಕಮಾಂಡ್ ನಿಂದ ಮಹತ್ವದ ಸೂಚನೆ ರವಾನೆ
ಜೆಡಿಎಸ್ ಜತೆ ಕಾಂಗ್ರೆಸ್ ಸೇರಿಕೊಂಡು ಗುಂಡ್ಲುಪೇಟೆ, ನಂಜನಗೂಡು ಎಲೆಕ್ಷನ್ ನಲ್ಲಿ, ಬಿಬಿಎಂಪಿಯಲ್ಲಿ ಏನೇನ್ ಮಾಡಿದ್ರು ಅನ್ನೋದು ಜನರಿಗೆ ಗೊತ್ತಿದೆ. ಜೆಡಿಎಸ್ ಬಿಜೆಪಿ ಟೀಂ ಅಂತಾರೆ ಈಗ, ಅವರು ಜೆಡಿಎಸ್ ಜತೆ ಯಾವಾಗ ಹೇಗೆ ಇರ್ತಾರೆ ಅನ್ನೋದು ಗೊತ್ತು ಅಂತ ಹೇಳಿದ್ದಾರೆ.
ನಾಳೆಯಿಂದ ಅಭಿಯಾನ: ಗುರುವಾರದಿಂದ ಏಪ್ರಿಲ್ 5 ರ ತನಕ ಬಿಜೆಪಿ ಯುವಮೋರ್ಚಾದಿಂದ ಕರುನಾಡ ಜಾಗೃತಿ ಯಾತ್ರೆ ನಡೆಯಲಿದೆ. ರಾಜ್ಯದಲ್ಲಿ 55 ಸಾವಿರ ಬೂತ್ ಗಳಿವೆ. ಪ್ರತಿ ಬೂತ್ ನಿಂದ 3 ಬೈಕ್ ಗಳ ಜಾಥಾ ನಡೆಯಲಿದೆ. ಈ ಮೂಲಕ ಮನೆ ಮನೆಗಳಿಗೆ ತೆರಳಿ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ತಿಳಿಪಡಿಸಲಾಗುತ್ತದೆ. 8 ದಿನಗಳ ಕಾಲ ಪ್ರತಿ ಬೂತ್ ನಲ್ಲಿ ಅಭಿಯಾನ ನಡೆಯಲಿದೆ. ಪ್ರತಿ ಬೂತ್ ನಲ್ಲಿ ಮೂರು ಬೈಕ್ ನಂತೆ ಕರುನಾಡು ಜಾಗೃತಿ ಅಭಿಯಾನ ಕೈಗೊಳ್ಳಲಾಗಿದೆ. ಪಿಎಫ್ ಐ ಮತ್ತು ಕೆಎಫ್ ಡಿ ವಿರುದ್ಧ ಪ್ರಕರಣ ಹಿಂಪಡೆದ ಸರ್ಕಾರದ ಧೋರಣೆ ಕುರಿತು ಅಭಿಯಾನ ನಡೆಸಲಿದ್ದೇವೆ. ಸರ್ಕಾರದ ಹಗರಣಗಳ ಕುರಿತು ಕರಪತ್ರದಲ್ಲಿ ಉಲ್ಲೇಖ ಮಾಡಲಾಗುವುದು. ಸರ್ಕಾರದ ವೈಫಲ್ಯಗಳನ್ನು ಪ್ರತಿ ಗ್ರಾಮಕ್ಕೂ ಮುಟ್ಟಿಸುವ ಕೆಲಸ ಮಾಡಲಾಗುವುದು ಅಂತ ಅವರು ವಿವರಿಸಿದ್ರು. ಇದನ್ನೂ ಓದಿ: ಯಾರ ಆಡಳಿತ ಹೇಗಿತ್ತು ಅನ್ನೋದು ಜನ ತೀರ್ಮಾನ ಮಾಡ್ತಾರೆ: ಪ್ರಮೋದಾ ದೇವಿ