ಐಪಿಎಲ್ ನಲ್ಲಿ ರಣ್‍ವೀರ್ ಗಾಗಿ ಹಣದ ಹೊಳೆ ಹರಿಸಲು ಮುಂದಾದ ಆಯೋಜಕರು

Public TV
1 Min Read
ranveer singh2

ಮುಂಬೈ: ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿವೆ. ಐಪಿಎಲ್‍ನ ಆಯೋಜಕರು ಪಂದ್ಯಾವಳಿಯ ಆರಂಭದ ಕಾರ್ಯಕ್ರಮವನ್ನು ಮತ್ತಷ್ಟು ಆಕರ್ಷಕಗೊಳಿಸಲು ಎಂದಿನಂತೆ ಬಾಲಿವುಡ್ ಸ್ಟಾರ್ ಗಳ ಮೊರೆ ಹೋಗಿದ್ದಾರೆ. ಸದ್ಯ ಬಾಲಿವುಡ್ ನಲ್ಲಿ ಬೇಡಿಕೆಯ ನಟ ಅಂತಾ ಅನ್ನಿಸಿಕೊಂಡಿರುವ ರಣ್‍ವೀರ್ ಸಿಂಗ್ ಗಾಗಿ ಹಣದ ಹೊಳೆಯನ್ನು ಹರಿಸಲು ಸಿದ್ಧರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

2018ರ ಐಪಿಎಲ್‍ನ ಉದ್ಘಾಟನಾ ಸಮಾರಂಭದಲ್ಲಿ ರಣ್‍ವೀರ್ 15 ನಿಮಿಷದ ಡ್ಯಾನ್ಸ್ ಕಾರ್ಯಕ್ರಮವನ್ನು ನೀಡಲಿದ್ದಾರೆ. ವೇದಿಕೆಯ ಮೇಲೆ 15 ನಿಮಿಷ ಡ್ಯಾನ್ಸ್ ಮಾಡಲು ರಣ್‍ವೀರ್ 5 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಅಂತಾ ಹೇಳಲಾಗುತ್ತಿದೆ. ಈ ಹಿಂದಿನ ಐಪಿಎಲ್ ಆರಂಭದ ಕಾರ್ಯಕ್ರಮದಲ್ಲಿ ಕರೀನಾ ಕಪೂರ್, ಸಲ್ಮಾನ್ ಖಾನ್ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ ಗಳು ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದ್ದರು.

ranveer

ಪದ್ಮಾವತ್ ಸಿನಿಮಾದ ಬಳಿಕ ರಣ್‍ವೀರ್ ಬೇಡಿಕೆಯ ನಟ ಅನ್ನಿಸಿಕೊಂಡಿದ್ದಾರೆ ಅಂತಾ ಬಾಲಿವುಡ್ ಪಂಡಿತರು ಹೇಳುತ್ತಾರೆ. ಈ ಹಿಂದೆ ತಮ್ಮ ಸಿಕ್ಸ್ ಪ್ಯಾಕ್ ಮತ್ತು ಸೆಕ್ಸಿ ಲುಕ್ ಮೂಲಕ ಅಪಾರ ಮಹಿಳಾ ಅಭಿಮಾನಿಗಳನ್ನು ರಣ್‍ವೀರ್ ಹೊಂದಿದ್ದರು. ಆದ್ರೆ ಪದ್ಮಾವತ್‍ನಲ್ಲಿ ಅಲ್ಲಾವುದ್ದೀನ್ ಖಲ್ಜಿ ಪಾತ್ರದಲ್ಲಿ ಅಮೋಘವಾಗಿ ನಟಿಸಿದ ಬಳಿಕ ರಣ್‍ವೀರ್ ಎಲ್ಲ ವರ್ಗದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಕಾರ್ಯಕ್ರಮ ಆಯೋಜಕರು ಈ ಬಾರಿ ರಣ್‍ವೀರ್ ಸಿಂಗ್ ಮೊರೆ ಹೋಗಿದ್ದಾರೆ.

ಸದ್ಯ ರಣ್‍ವೀರ್ ಸಿಂಗ್ ‘ಗಲ್ಲಿ ಬಾಯ್’ ಮತ್ತು ‘ಸಿಂಬಾ’ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಬ್ಯೂಸಿ ಶೂಟಿಂಗ್ ಶೆಡ್ಯೂಲ್ ನಲ್ಲಿಯೂ ರಣ್‍ವೀರ್ ಐಪಿಎಲ್ ಕಾರ್ಯಕ್ರಮದ ಡ್ಯಾನ್ಸ್ ಪ್ರಾಕ್ಟಿಸ್ ಮಾಡ್ತಿದ್ದಾರೆ. ಇನ್ನು ಗಲ್ಲಿ ಬಾಯ್ ನಲ್ಲಿ ರಣ್‍ವೀರ್ ಗೆ ಜೊತೆಯಾಗಿ ಮೊದಲ ಬಾರಿಗೆ ಆಲಿಯಾ ಭಟ್ ಜೊತೆಯಾಗಿದ್ದಾರೆ. ಸಿನಿಮಾ 14, ಫೆಬ್ರವರಿ 2019ರಂದು ತೆರೆಕಾಣಲಿದೆ ಅಂತಾ ಚಿತ್ರತಂಡ ತಿಳಿಸಿದೆ.

ranveer singh

Share This Article
Leave a Comment

Leave a Reply

Your email address will not be published. Required fields are marked *