ಕೊನೆಗೂ ತಮ್ಮ ಮುಂದಿನ ಸಿನಿಮಾ ಬಗ್ಗೆ ರಿವಿಲ್ ಮಾಡಿದ ರಾಜಮೌಳಿ

Public TV
1 Min Read
RRR final

ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ `ಬಾಹುಬಲಿ’ ಚಿತ್ರದ ನಿರ್ದೇಶಕ ಎಸ್.ಎಸ್ ರಾಜಮೌಳಿಯವರ ಮುಂದಿನ ಚಿತ್ರ ಯಾವುದು ಎಂಬ ನಿರೀಕ್ಷೆಯಲ್ಲಿದ್ದ ಸಿನಿಪ್ರಿಯರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ಗುರುವಾರದಂದು ರಾಜಮೌಳಿ ತಮ್ಮ ಮುಂದಿನ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅಭಿನಯಿಸುತ್ತಿರುವುದು ಖಚಿತವಾಗಿದೆ.

ಗುರುವಾರ ಸಂಜೆ ಟ್ವೀಟ್ ಮಾಡಿರುವ ರಾಜಮೌಳಿ, ತಮ್ಮ ಹೊಸ ಪ್ರಾಜೆಕ್ಟ್ ಕುರಿತು ಹೇಳಿದ್ದಾರೆ. ಮೋಷನ್ ಫಿಕ್ಚರ್ ನಲ್ಲಿ ‘RRR’ ಎನ್ನುವ ಅಕ್ಷರಗಳು ಮಾತ್ರ ಇವೆ. ಈ ‘RRR’ ಅಕ್ಷರಗಳು ಅವರ ಚಿತ್ರದ ಹೆಸರಲ್ಲ. ಬದಲಾಗಿ ರಾಜಮೌಳಿ, ರಾಮ್ ಚರಣ್ ಹಾಗೂ ಜ್ಯೂ. ಎನ್.ಟಿ.ರಾಮ್ ರಾವ್ ಅವರ ಹೆಸರುಗಳ ಅಕ್ಷರಗಳಾಗಿವೆ.

RRR

ರಾಜಮೌಳಿಯವರ ಹೊಸ ಚಿತ್ರ ಕುತೂಹಲ ಹುಟ್ಟಿಸಿದ್ದು, ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ಹಿಂದೆಯೇ ರಾಮ್ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್‍ಟಿಆರ್ ಜೊತೆ ರಾಜಮೌಳಿಯವರು ಕೆಲಸ ಮಾಡಿದ್ದು, ರಾಮ್ ಚರಣ್ ತೇಜಾರ `ಮಗಧೀರ’ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅವರ `ಸ್ಟೂಡೆಂಟ್ ನಂಬರ್ 1′ ಚಿತ್ರವನ್ನು ನಿರ್ದೇಶಿಸಿದ್ದರು. ರಾಜಮೌಳಿಯವರ ಹೊಸ ಚಿತ್ರ #RRR ಕುರಿತು ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲವಾದರೂ ಮೂವರ ಕಾಂಬಿನೇಷನ್ ನಲ್ಲಿ ಚಿತ್ರ ಅದ್ಭುತವಾಗಿ ಮೂಡಿ ಬರಲಿದೆ ಎಂಬ ಮಾತುಗಳು ಕೇಳಿಬಂದಿವೆ.

ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಸಿನಿಮಾಗೆ ಕಥೆ ಬರೆದಿದ್ದಾರಂತೆ. ಕೀರವಾಣಿ ಸಂಗೀತ, ಕೆಲ ತಿಂಗಳುಗಳ ಹಿಂದೆ ರಾಮ್ ಚರಣ್ ತೇಜಾ ಹಾಗೂ ಎನ್‍ಟಿಆರ್ ಜೊತೆ ಫೋಟೋ ತೆಗೆದುಕೊಂಡಿದ್ದರು. ಈಗಾಗಲೇ ಈ ಸ್ಟಾರ್ ನಟರು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಈ ವರ್ಷದ ಅಕ್ಟೋಬರ್ ನಸಿನಿಮಾ ಸೆಟ್ಟೇರಲಿದೆ.

Share This Article
Leave a Comment

Leave a Reply

Your email address will not be published. Required fields are marked *