ದಾವಣಗೆರೆ: ದೊಡ್ಡಪ್ಪನೇ ಯುವತಿಗೆ ಲೈಂಗಿಕ ಕಿರುಕುಳ ನೀಡಿರೋ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಚಿಕ್ಕ ವಯಸ್ಸಿನಲ್ಲೇ ತಂದೆ- ತಾಯಿಯನ್ನು ಕಳೆದುಕೊಂಡ ಯುವತಿ ದೊಡ್ಡಪ್ಪನ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಸ್ವಂತ ದೊಡ್ಡಪ್ಪನೇ ಯುವತಿ ಮೇಲೆ ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ದೌರ್ಜನ್ಯ ಎಸಗುತ್ತಿದ್ದರು.
ದೊಡ್ಡಪ್ಪನ ವರ್ತನೆಯಿಂದ ಬೇಸತ್ತು ಯುವತಿ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಮುಂದಾಗಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದರು. ಯುವತಿಯ ದೊಡ್ಡಪ್ಪ ಸಿ.ವಿ ಪ್ರಭಾಕರ್ ಬೀಜ ನಿಗಮದ ಅಧಿಕಾರಿಯಾಗಿ ದಾವಣಗೆರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಿ.ವಿ ಪ್ರಭಾಕರ್ ಪ್ರತಿನಿತ್ಯ ಯುವತಿಗೆ ಕಿರುಕುಳ ನೀಡುತ್ತಿದ್ದು, ನೊಂದ ಯುವತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಸಿ.ವಿ ಪ್ರಭಾಕರ್ ವಿರುದ್ಧ ಐಪಿಸಿ ಸೆಕ್ಷನ್ 376ರ ಅನ್ವಯ ಕೇಸ್ ದಾಖಲಾಗಿದೆ.
ಸದ್ಯ ಆರೋಪಿ ಪ್ರಭಾಕರ್ ಬಂಧನದ ಭೀತಿಯಲ್ಲಿದ್ದು, ಯುವತಿ ಸರ್ಕಾರಿ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲಿದ್ದಾರೆ. ಯುವತಿಗೆ ಬೆಂಬಲಕ್ಕೆ ಸ್ಥಳೀಯರು ನಿಂತಿದ್ದಾರೆ.