ಈ ಪುಟಾಣಿ ಚಾಕ್ಲೇಟ್ ಬೆಲೆ 6 ಲಕ್ಷ ರೂ.

Public TV
1 Min Read
chocolate 1

ಲಿಸ್ಬನ್: ವಿಶ್ವದ ಅತ್ಯಂತ ದುಬಾರಿ ಚಾಕ್ಲೇಟನ್ನ ಪೋರ್ಚುಗಲ್‍ನ ಒಬಿಡೋಸ್‍ನಲ್ಲಿ ಶುಕ್ರವಾರದಂದು ಪ್ರದರ್ಶನಕ್ಕೆ ಇಡಲಾಗಿದೆ.

ಈ ಪುಟಾಣಿ ಚಾಕ್ಲೇಟ್ ಬೆಲೆ ಬರೋಬ್ಬರಿ 7,728 ಯೂರೋ(ಅಂದಾಜು 6 ಲಕ್ಷ ರೂ.) ಚಾಕ್ಲೇಟ್ ಮೇಲೆ ತಿನ್ನಲು ಯೋಗ್ಯವಾದ ಚಿನ್ನದ ಪದರವಿದ್ದು, ಒಳಗೆ ಕೇಸರಿ ದಳ, ವೈಟ್ ಟ್ರಫಲ್, ಮಡಗಾಸ್ಕರ್‍ನ ವೆನಿಲ್ಲಾ ತುಂಬಲಾಗಿದೆ. ದುಬಾರಿ ಚಾಕ್ಲೇಟ್ ನ ಕಾವಲಿಗಾಗಿ ಇಬ್ಬರು ಸಮವಸ್ತ್ರಧಾರಿಗಳನ್ನ ನಿಯೋಜಿಸಲಾಗಿತ್ತು.

chocolate 2

ಈ ಚಾಕ್ಲೇಟನ್ನ ತಯಾರಿಸಿರುವ ವ್ಯಕ್ತಿ ಡೇನಿಯಲ್ ಗೋಮ್ಸ್. ವಜ್ರದ ಆಕಾರದಲ್ಲಿರುವ ಈ ಚಾಕ್ಲೇಟನ್ನ ಜಗತ್ತಿನ ಅತ್ಯಂತ ದುಬಾರಿ ಚಾಕ್ಲೇಟ್ ಎಂದು ಗಿನ್ನೀಸ್ ಬುಕ್ ಆಫ್ ರೆಕಾಡ್ರ್ಸ್ ಪ್ರಮಾಣೀಕರಿಸಿದೆ ಎಂದು ಗೋಮ್ಸ್ ಹೇಳಿದ್ದಾರೆ.

chocolate 3

ಈ ಹಿಂದೆ 2017ರಲ್ಲಿ ಡ್ಯಾನಿಷ್ ಚಾಕ್ಲೇಟ್ ತಯಾರಕ ಫ್ರಿಟ್ಸ್ ನಿಪ್ಸ್‍ಚೈಲ್ಡ್ ಎಂಬವರು ತಯಾರಿಸಿದ್ದ 250 ಡಾಲರ್(ಅಂದಾಜು 16 ಸಾವಿರ ರೂ.) ಮೌಲ್ಯದ ಚಾಕ್ಲೇಟ್ ಈ ದಾಖಲೆಗೆ ಪಾತ್ರವಾಗಿತ್ತು. ಇದೀಗ ಆ ದಾಖಲೆಯನ್ನ ಈ ಚಾಕ್ಲೇಟ್ ಮುರಿದಿದೆ.

ಕೀರಿಟದ ಆಕಾರದ ಇದರ ಬಾಕ್ಸ್ ಮೇಲೆ 5500 ಸ್ವರೋವ್‍ಸ್ಕಿ ಹರಳುಗಳಿಂದ ಅಲಂಕರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *