ವಿಡಿಯೋ: ತಾನು ಸಾಕಿದ ಹುಲಿಯಿಂದಲೇ ದಾಳಿಗೊಳಗಾಗಿ ಸಾವನ್ನಪ್ಪಿದ ತರಬೇತುದಾರ

Public TV
1 Min Read
zoo keeper tiger

ಬೀಜಿಂಗ್: ಹುಲಿಯೊಂದು ತನ್ನನ್ನು ಸಾಕಿದ ಮೃಗಾಲಯದ ಸಿಬ್ಬಂದಿಯನ್ನೇ ಕೊಂದಿರುವ ಘಟನೆ ಚೀನಾದಲ್ಲಿ ನಡೆದಿದೆ.

ಕಳೆದ ಭಾನುವಾರ ಇಲ್ಲಿನ ಫುಝೌ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ಮೃಗಾಲಯದ ಸಿಬ್ಬಂದಿಯಾದ ವೂ ಪ್ರಾಣಿಗಳಿಗೆ ತರಬೇತಿ ನೀಡಲು ಬಳಸುವ ಬೋನಿನೊಳಗೆ ಹುಲಿಯೊಂದಿಗೆ ಇದ್ದರು. ಯಾವಾಗ್ಲೂ ಶಾಂತವಾಗಿರುತ್ತದೆ ಹುಲಿ ಅಂದು ಇದ್ದಕ್ಕಿದ್ದಂತೆ ವೂ ಅವರಿಗೆ ಕಚ್ಚಿದ್ದು, ಅವರು ಉಸಿರುಗಟ್ಟಿ ಸಾವನ್ನಪ್ಪಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

zoo keeper 2

ಫುಜೌ ಸಿಬ್ಬಂದಿಯಾಗಿದ್ದ ವೂ, ಹುಲಿ ಮರಿಯಾಗಿದ್ದಾಗಿನಿಂದಲೂ ಅದರ ಆರೈಕೆ ಮಾಡಿದ್ದರು. ದೀರ್ಘ ಕಾಲ ಮಾನವನೊಂದಿಗೆ ಒಡನಾಟದಲ್ಲೇ ಹುಲಿಯನ್ನ ಸಾಕಲಾಗಿತ್ತು ಎಂದು ವರದಿಯಾಗಿದೆ.

zoo keeper 1

ಈ ಘಟನೆಯನ್ನ ಪ್ರತ್ಯಕ್ಷದರ್ಶಿಗಳು ವಿಡಿಯೋ ಮಾಡಿದ್ದು, ಸಾವನ್ನಪ್ಪಿದ ತನ್ನ ತರಬೇತುದಾರನ ದೇಹದ ಬಳಿ ಹುಲಿ ನಿಂತಿರೋದನ್ನ ಕಾಣಬಹುದು. ಪೊಲೀಸರಿಗೆ ಕರೆ ಮಾಡಿ ಎಂದು ಅಲ್ಲಿದ್ದವರು ಕಿರುಚೋದನ್ನೂ ವಿಡಿಯೋದಲ್ಲಿ ಕೇಳಬಹುದು.

zoo keeper 3

ಮತ್ತೊಂದು ವಿಡಿಯೋದಲ್ಲಿ ಹುಲಿ ವೂ ಅವರ ಮೇಲೆ ದಾಳಿ ಮಾಡುತ್ತಿದ್ದು, ಇತರೆ ಸಿಬ್ಬಂದಿ ಕೋಲಿನಿಂದ ಅದನ್ನ ಓಡಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದ್ರೆ ಅವರ ಪ್ರಯತ್ನ ವಿಫಲವಾಗಿದ್ದು ವೂ ಹುಲಿಯ ದಾಳಿಯಿಂದ ಕೊನೆಯುಸಿರೆಳೆದಿದ್ದಾರೆ.

https://www.youtube.com/watch?v=4YHvEvfzDp4

Share This Article
Leave a Comment

Leave a Reply

Your email address will not be published. Required fields are marked *